Tuesday, March 17, 2009

ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

'
ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ನಾನು ಸಾಯಂಕಾಲ ಕಛೇರಿಯಿಂದ ಬಂದ ಮೇಲೆ,
ಹೆಂಡತಿ ಅಡುಗೆ ಮಾಡುತ್ತಿರುತ್ತಾಳೆ,
ನನಗೆ ಅಡುಗೆ ಮನೆಯಲ್ಲಿನ ಪಾತ್ರೆಗಳ ಶಬ್ದ ಕೇಳುತ್ತಿರುತ್ತದೆ,
ನಾನು ಕಳ್ಳ ಹೆಜ್ಜೆ ಇಡುತ್ತಾ ಮನೆ ಪ್ರವೇಶಿಸುತ್ತೇನೆ,
ನನ್ನ ಕಪ್ಪು ಕಪಾಟಿ ನಿಂದ ಬಾಟಲಿಯನ್ನು ಹೊರತೆಗೆಯುವೆ,
ಶಿವಾಜಿ ಮಹಾರಾಜರು ಚಿತ್ರ ಪಟದಿಂದ ನನ್ನೆಡೆಗೆ ನೋಡುತ್ತಿದ್ದಾರೆ.
ಆದರೆ ಯಾರಿಗೂ ಇದು ಗೊತ್ತಿಲ್ಲ,
ಏಕೆಂದರೆ, ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ಹಳೆಯ ಸಿಂಕಿನ ಮೇಲಿರುವ ರ್ಯಾಕಿನಿಂದ ಗ್ಲಾಸ್ ಎತ್ತಿಕೊಳ್ಳುವೆ,
ಶೀಘ್ರವಾಗಿ ಒಂದು ಪೆಗ್ ಮುಗಿಸುವೆ,
ಗ್ಲಾಸನ್ನು ತೊಳೆದು ವಾಪಸ್ ರ್ಯಾಕ್ ನಲ್ಲಿ ಇಡುವೆ,
ಹಾಂ ಖಂಡಿತ, ಬಾಟಲಿಯನ್ನು ವಾಪಸ್ ಕಪಾಟಿನಲ್ಲಿ ಇಡುವೆ,
ಶಿವಾಜಿ ಮಹಾರಾಜರು ಮುಗುಳ್ನಗುತ್ತಿದ್ದಾರೆ.

ಅಡುಗೆ ಮನೆಯೊಳಗೆ ಇಣುಕುವೆ,
ಹೆಂಡತಿ ಅಲೂಗಡ್ಡೆ ಹೆಚ್ಚುತ್ತಿದ್ದಾಳೆ,
ಇದೆಲ್ಲ ಯಾರಿಗೂ ಗೊತ್ತಿಲ್ಲ,
ಏಕೆಂದರೆ ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ನಾನು ಕೇಳಿದೆ, "ಅಯ್ಯರ್ ರವರ ಮಗಳ ಮದುವೆ ಬಗ್ಗೆ ಏನಾದರೂ ಸುದ್ದಿ ತಿಳಿಯಿತೇ?"
ಹೆಂಡತಿ ಉತ್ತರಿಸುತ್ತಾಳೆ "ಇಲ್ಲ, ಪಾಪ ನತದೃಷ್ಟೆ, ಅವಳಿಗಿನ್ನೂ ಅನುರೂಪದ ವರ ಸಿಕ್ಕಿಲ್ಲ"

ನಾನು ಮತ್ತೆ ಹೊರಬರುವೆ, ಕಪ್ಪು ಕಪಾಟಿ ನಿಂದ ಕ್ಷೀಣ ಸದ್ದು,
ಆದರೆ ಬಾಟಲಿ ಹೊರತೆಗೆಯುವಾಗ ಸದ್ದಾಗದಂತೆ ಜಾಗೃತೆ ವಹಿಸುತ್ತೇನೆ,
ಸಿಂಕಿನ ಮೇಲಿನ ಹಳೆಯ ರ್ಯಾಕ್ ನಿಂದ ಗ್ಲಾಸನ್ನು ತೆಗೆದುಕೊಳ್ಳುವೆ,
ಶೀಘ್ರವಾಗಿ ಒಂದು ಪೆಗ್ ಮುಗಿಸುತ್ತೇನೆ,
ಬಾಟಲಿಯನ್ನು ತೊಳೆದು ಸಿಂಕಿನಲ್ಲಿ ಇಡುತ್ತೇನೆ,
ಮತ್ತು ಕಪ್ಪು ಗ್ಲಾಸನ್ನು ಕಪಾಟಿನಲ್ಲಿ,
ಆದರೆ ಇದು ಯಾರಿಗೂ ಗೊತ್ತಿಲ್ಲ,
ಏಕೆಂದರೆ ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ನಾನು ಮತ್ತೆ ಹೆಂಡತಿಯನ್ನು ಕೇಳುತ್ತೇನೆ,
"ಪರವಾಗಿಲ್ಲ ಬಿಡು, ಅಯ್ಯರ್ ರವರ ಮಗಳಿಗೆ ಇನ್ನೂ ಅಷ್ಟೇನೂ ವಯಸ್ಸಾಗಿಲ್ಲವಲ್ಲ"
ಅದಕ್ಕೆ ನನ್ನ ಹೆಂಡತಿ,
"ಏನು ಹೇಳ್ತಿದಿರಾ..ಅವಳಿಗೀಗಾಗಲೆ 28 ತುಂಬಿದೆ, ಕತ್ತೆ ವಯಸ್ಸಾಗಿದೆ.."
ನನಗೆ ಅವಳ ವಯಸ್ಸು ಮರೆತು ಹೋಗಿದೆ,
"ಓ ಹೌದಲ್ವಾ!' ನಾನುಲಿಯುವೆ.
ನಾನು ಮತ್ತೆ ನನ್ನ ಕಪ್ಪು ಕಪಾಟಿ ನಿಂದ ಅಲೂಗಡ್ಡೆ ಹೊರತೆಗೆಯುತ್ತೇನೆ,
ಆದರೆ ಕಪಾಟಿನ ಸ್ಥಳ ತನ್ನಿಂದ ತಾನೇ ಬದಲಾಗಿದೆ!
ರ್ಯಾಕಿನಿಂದ ಬಾಟಲಿ ತೆಗೆದು ಶೀಘ್ರವಾಗಿ ಒಂದು ಪೆಗ್ ಮುಗಿಸುತ್ತೇನೆ.

ಶಿವಾಜಿ ಮಹಾರಾಜರು ಜೋರಾಗಿ ನಗುತ್ತಿದ್ದಾರೆ!
ನಾನು ರ್ಯಾಕ್ ಅನ್ನು ಅಲೂಗಡ್ಡೆಯೊಳಗೆ ಇಟ್ಟು,
ಶಿವಾಜಿ ಮಹಾರಾಜರ ಚಿತ್ರಪಟವನ್ನು ತೊಳೆದು,
ವಾಪಸ್ ಅದನ್ನು ಕಪ್ಪು ಕಪಾಟಿನಲ್ಲಿ ಇಡುತ್ತೇನೆ,
ಹೆಂಡತಿ ಸಿಂಕನ್ನು ಸ್ಟೋವ್ ಮೇಲೆ ಇಡುತ್ತಿದ್ದಾಳೆ,
ಆದರೆ ಇದೆಲ್ಲ ಯಾರಿಗೂ ಗೊತ್ತಿಲ್ಲ,
ಏಕೆಂದರೆ ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ನಾನು ಕೋಪದಿಂದ ಹೆಂಡತಿಗೆ ಕೇಳುತ್ತೇನೆ, "ನೀನು ಅಯ್ಯರ್ ಅವರನ್ನು ಕತ್ತೆ ಎಂದು ಕರೆಯುವೆಯ?
ಅವರನ್ನು ಮತ್ತೆ ಹಾಗೆ ಕರೆದರೆ ನಿನ್ನ ನಾಲಿಗೆ ಕತ್ತರಿಸುತ್ತೇನೆ! ಹುಷಾರ್!!"
ಅದಕ್ಕೆ ಹೆಂಡತಿ, "ಸುಮ್ಮನೇ ಏನೇನೋ ಗೊಣಗಾಡಬೇಡಿ,
ಹೊರಗೆ ಹೋಗಿ ಶಾಂತವಾಗಿ ಕುಳಿತುಕೊಳ್ಳಿ" ಎನ್ನುತ್ತಾಳೆ!
ನಾನು ಮತ್ತೆ, ಆಲೂಗಡ್ಡೆ ಯಿಂದ ಬಾಟಲಿ ತೆಗೆದು,
ಕಪ್ಪು ಕಪಾಟಿ ನೊಳಗೆ ಹೋಗಿ ಒಂದು ಪೆಗ್ ಮುಗಿಸುತ್ತೇನೆ.
ಸಿಂಕನ್ನು ತೊಳೆದು, ರ್ಯಾಕಿನ ಮೇಲೆ ಇಡುತ್ತೇನೆ.
ಹೆಂಡತಿ ನಗುತ್ತಿದ್ದಾಳೆ!

ಶಿವಾಜಿ ಮಹಾರಾಜರು ಇನ್ನೂ ಅಡುಗೆ ಮಾಡುತ್ತಿದ್ದಾರೆ.
ಆದರೆ, ಇದೆಲ್ಲ ಯಾರಿಗೂ ಗೊತ್ತಿಲ್ಲ,
ಏಕೆಂದರೆ ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ನಾನು ಈ ಸಾರಿ ನಗುತ್ತಾ ಹೆಂಡತಿಯನ್ನು ಕೇಳುತ್ತೇನೆ,
"ಹಾಗಾದರೆ, ಅಯ್ಯರ್ ರವರು ಕತ್ತೆಯನ್ನು ಮದುವೆ ಆಗುತ್ತಿದ್ದಾರೆಯೇ!?",
"ರೀ ಹೋಗಿ ನಿಮ್ಮ ಮುಖದ ಮೇಲೆ ಸ್ವಲ್ಪ ನೀರು ಚಿಮುಕಿಸಿಕೊಳ್ಳಿ"
ಹೆಂಡತಿ ಅಬ್ಬರಿಸುತ್ತಾಳೆ.

ನಾನು ಮತ್ತೆ ಅಡುಗೆ ಮನೆಯೊಳಗೆ ಹೋಗುತ್ತೇನೆ,
ಸಾವಕಾಶವಾಗಿ ಸಿಂಕಿನ ಮೇಲೆ ಕುಳಿತುಕೊಳ್ಳುತ್ತೇನೆ,
ಸ್ಟೋವ್ ಕೂಡ ಸಿಂಕಿನ ಮೇಲಿದೆ,
ಹೊರಗಡೆ ರೂಮಿನ ಬಾಟಲಿಯೊಳಗಿಂದ ಯಾವುದೋ ಕ್ಷೀಣ ಸದ್ದು,

ನಾನು ಇಣುಕಿ ನೋಡುತ್ತೇನೆ,
ಹೆಂಡತಿ ಸಿಂಕಿನಲ್ಲಿ ಒಂದು ಪೆಗ್ ಮುಗಿಸುತ್ತಿದ್ದಾಳೆ!
ಆದರೆ ಯಾವ ಕತ್ತೆಗೂ ನಾನು ಏನು ಮಾಡಿದೆ ಎಂದು ಗೊತ್ತಿಲ್ಲ,
ಏಕೆಂದರೆ ಶಿವಾಜಿ ಮಹಾರಾಜರು(?!) ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ಅಯ್ಯರ್ ರವರು ಇನ್ನೂ ಅಡುಗೆ ಮಾಡುತ್ತಿದ್ದಾರೆ,
ನಾನು ಚಿತ್ರಪಟ ದಿಂದ ಹೆಂಡತಿಯೆಡೆಗೆ ನೋಡಿ ಮುಗುಳ್ನಗುತ್ತಿದ್ದೇನೆ,
ಏಕೆಂದರೆ ನಾನು ಯಾವತ್ತೂ . . ಏನನ್ನು ತೆಗೆದುಕೊಳ್ಳುವುದಿಲ್ಲ?
ಅರೆ, ಮರೆತು ಹೋಯಿತಲ್ಲ!

- ಈ-ಮೇಲ್ ಫಾರ್ವರ್ಡ್ ಆಧಾರಿತ
'

10 comments:

  1. ಉಮೇಶ್
    ಅದ್ಭುತವಾಗಿತ್ತು ನಿಮ್ಮ ಕವಿತೆ! ಇಂತಹ ಕವಿತೆಯನ್ನು ನಾನು ಇದುವರೆಗೂ ಓದಿರಲಿಲ್ಲ. ಹಾಸ್ಯಕವಿತೆಯೆಂದು ಲೇಬಲ್ ಅಂಟಿಸಿಕೊಂಡ ಕವಿತೆಗಳೂ ನನ್ನನ್ನು ಇಷ್ಟೊಂದು ನಗಿಸಿರಲಿಲ್ಲ. ಹೇಗ್ರಿ ಬಂತು ನಿಮಗೆ ಈ ಐಡಿಯಾ? ಸ್ವಂತ ಅನುಭವವೇ!

    ReplyDelete
  2. ಅಯ್ಯೋ ಇಲ್ಲ ಸರ್,
    ನನಗಿನ್ನೂ ಮದುವೆಯೇ ಆಗಿಲ್ಲ :)

    ಇದು ನನಗೆ ಮೂಲತಃ ಆಂಗ್ಲ ಭಾಷೆಯಲ್ಲಿ ಸಿಕ್ಕಿದ್ದು,
    ಅದನ್ನು ಕನ್ನಡಕ್ಕೆ ಅನುವಾದಿಸಿದೆ, ಅಷ್ಟೇ.
    ಇದು ಈ ಮೇಲ್ ಫಾರ್ವರ್ಡ್ ಆಧಾರಿತ; ಮೂಲ ಕರ್ತೃ ಯಾರೆಂದು ಗೊತ್ತಿಲ್ಲ.
    ಕವಿತೆಯನ್ನು ಆನಂದಿಸಿದ್ದಕ್ಕೆ ಧನ್ಯವಾದಗಳು.

    ReplyDelete
  3. ಒಮ್ಮೆ ಇದು ಹಾಯ್ ಬೆಂಗಳೂರ್'ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನೀವೇ ಅನುವಾದಿಸಿದ್ದೋ ? ತುಂಬಾ ಮೆಚ್ಚುಗೆಯಾಗಿತ್ತು. ಆವಾಗಾವಾಗ ಈ ಕವಿತೆಯನ್ನು ನಾವು ಸ್ನೇಹಿತರು ನೆನಪಿಸಿಕೊಳ್ಳುತ್ತಿದ್ದೆವು. ಕವನ ತುಂಂಂಂಂಬಾ ಚೆನ್ನಾಗಿದೆ.

    ReplyDelete
  4. ಹೌದು ದಿನೇಶ್,
    ಇದು ನಾನೇ ಅನುವಾದಿಸಿದ್ದು.
    ಸ್ನೇಹಿತನೊಬ್ಬ ಕಳಿಸಿದ ಮೇಲ್ ನಲ್ಲಿ ಆಂಗ್ಲ ಭಾಷಾ ಕವನವಿತ್ತು, ಇಷ್ಟವಾಯಿತು; ಅದಕ್ಕೆ ಅನುವಾದಿಸಿ ಇಲ್ಲಿ ಹಾಕಿದೆ. ಕವನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
    ಹೀಗೆ ಬರುತ್ತೀರಿ. :)

    ReplyDelete
  5. ಹೆಹೆ...ಸಕತ್ ನಗು ಬಂತು ! ಮಜವಾಗಿದೆ !

    ReplyDelete
  6. ಧನ್ಯವಾದಗಳು ಲಕ್ಷ್ಮಿಯವರೇ :)
    ಹೀಗೇ ಬರುತ್ತ ಇರಿ.

    ReplyDelete
  7. hey Umesh...nimma comment nanna blog nali nodi nimma blog visit maadide...

    ee perticular kavithe odakke shuru maadidaaga idarallenu vishesha ide ankonde!!! adre munde oduttha hoda haage nagu thadeyakke aagalilla...adige manelidda amma 'yenaaythe??' anta kelidru :P

    Nangu kannadadalli bareyalu tumba aase...but dont know how to do it :( neevu nanage guru aagthira???

    do contact me through my id...sumven@gmail.com

    ReplyDelete
  8. ಹಾಯ್ ಸುಮನ,

    ಪ್ರತಿಕ್ರಿಯೆಗೆ ವಂದನೆಗಳು. ನಿಮಗೂ ಕನ್ನಡದಲ್ಲಿ ಟೈಪಿಸಲು ಇಷ್ಟ ಅಂತ ತಿಳಿದು ಖುಷಿಯಾಯಿತು. ನಿಮಗೆ ಗುರು ಆಗುವ ಮಟ್ಟಿಗಂತೂ ನಾನಿನ್ನೂ ಬೆಳೆದಿಲ್ಲ :). ಆದರೆ ನನಗೆ ತಿಳಿದ ಮಟ್ಟಿಗೆ ಸಹಾಯ ಮಾಡಬಲ್ಲೆ. ಕನ್ನಡದಲ್ಲಿ ಟೈಪಿಸುವುದು ತುಂಬಾ ಸುಲಭ. ನಾನು ಕನ್ನಡ ಟೈಪ್ ಮಾಡಲು ಕ್ವಿಲ್‌ಪ್ಯಾಡ್ (http://www.quillpad.com/kannada/editor.html) ಬಳಸುತ್ತೇನೆ. ನೀವೂ ಟ್ರೈ ಮಾಡಿ.

    ಧನ್ಯವಾದಗಳು.

    -ಉಮೀ

    ReplyDelete
  9. ಇಸ್ಮಾಯಿಲ್,

    ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು. ಆಗಾಗ್ಗೆ ಬರುತ್ತೀರಿ.

    -ಉಮೇಶ್

    ReplyDelete