'ಕಳೆದ ವಾರಾಂತ್ಯವನ್ನು ನನ್ನ ಸ್ನೇಹಿತರೊಂದಿಗೆ ಕೊಡಚಾದ್ರಿಯಲ್ಲಿ ಕಳೆದೆ. ಅಲ್ಲಿ ತೆಗೆದ ಕೆಲವು ಚಿತ್ರಗಳು.
ಲಿಂಗನಮಕ್ಕಿ ಹಿನ್ನೀರು ಪ್ರದೇಶದಿಂದ ಕಂಡ ಸೂರ್ಯಾಸ್ತದ ದೃಶ್ಯ...
ಸೂರ್ಯೋದಯ ನೋಡಲು ಹೋಗುವಾಗ ಕಂಡ ಬಾನಂಚಿನ ವರ್ಣ ಚಿತ್ತಾರ
ಆಹಾ!!.. ನಯನ ಮನೋಹರ!!!... ಅಲ್ವಾ?
ಹೇಗಿದೆ ಕೊಡಚಾದ್ರಿಯ ಪ್ರಕೃತಿ ಸೌಂದರ್ಯ...
ಕೊಡಚಾದ್ರಿ ಸಮೀಪದಲ್ಲೇ ಇರುವ ಶಿವಪ್ಪ ನಾಯಕನ ಕೋಟೆ..
ಶಿವಪ್ಪ ನಾಯಕನ ದರ್ಬಾರ್ ನಡೆಯುತ್ತಿದ್ದ ಸ್ಥಳ..
'
ಉಮಿ ಸರ್,
ReplyDeleteಕೊಡಚಾದ್ರಿ, ಸೂರ್ಯೋದಯ ಮತ್ತು ಸೂರ್ಯಾಸ್ತದ ಫೋಟೋಗಳು ಚೆನ್ನಾಗಿವೆ..ನಾನು ಹಿಂದೆ ಕೊಡಚಾದ್ರೆಗೆ ಟ್ರಕ್ಕಿಂಗ್ ಹೋಗಿದ್ದೆ...ಎಲ್ಲಾ ನೆನಪುಗಳು ಮರುಕಳಿಸಿದವು....
ಅಭಿನವ ಶಿವಪ್ಪ ನಾಯಕ ಫೋಟೊ.....ಆಹ ಅಹ.ಅಹ.....
ಉಮಿ....
ReplyDeleteಫೋಟೊಗಳು ಸೊಗಾಸಾಗಿದೆ...
ಸೂರ್ಯೋದಯದ ಫೋಟೊಗಳಂತೂ ಬಹಳ ಚೆನ್ನಾಗಿದೆ...
ಇವುಗಳ ಸಂಗಡ ಚಿಕ್ಕದಾಗಿ , ಚೊಕ್ಕವಾಗಿ(ಕೆಲವಕ್ಕೆ ಇವೆ)
ಬರಹ ಇದ್ದರೆ ಇನ್ನೂ ಮಜಾ ಬರುತ್ತಿತ್ತು...
ನಮಗೆಲ್ಲ ಕೊಡಚಾದ್ರಿಯ ಸೊಬಗು ಉಣಿಸಿದ್ದಕ್ಕೆ..
ಧನ್ಯವಾದಗಳು...
ಶಿವು ಸರ್,
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು.
ಪ್ರಕಾಶ್ ಸರ್,
ಪ್ರತಿಕ್ರಿಯೆಗೆ ಧನ್ಯವಾದಗಳು, ಶೀಘ್ರದಲ್ಲೇ ಚಿತ್ರಗಳಿಗೆ ಇನ್ನಷ್ಟು ಬರಹಗಳನ್ನು ಸೇರಿಸುತ್ತೇನೆ.
ಫೋಟೋಗ್ರಫಿಯಲ್ಲಿ ನಾನಿನ್ನೂ ಅಂಬೆಗಾಲಿಡುತ್ತಿದ್ದೇನೆ. ಚಿತ್ರಗಳನ್ನು ಆನಂದಿಸಿದ್ದಕ್ಕೆ ಮತ್ತು ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ನಿಮ್ಮ ಬ್ಲಾಗ್ ಗೆ ಮೊದಲ ಭೇಟಿ,ಇಟ್ಟಿಗೆ ಸಿಮೆಂಟ್ನಲ್ಲಿ ನಿಮ್ಮ ಕಾಮೆಂಟ್ ನೋಡಿ ಬಂದೆ. ಕೊಡಚಾದ್ರಿ ಬಗ್ಗೆ ಹೋದವರಿಂದ ವರ್ಣನೆ ಕೇಳಿದ್ದಷ್ಟೇ.ಹೋಗಲು ಆಗಿರಲಿಲ್ಲ. ಕೊಡಚಾದ್ರಿ ಫೋಟೋ ಒಂದಕ್ಕಿಂತ ಒಂದು ಚೆನ್ನ. ನೋಡಲು ಅವಕಾಶ ಒದಗಿಸಿದ ನಿಮಗೆ ಧನ್ಯವಾದಗಳು.
ReplyDeleteಭಾರ್ಗವಿಯವರೇ,
ReplyDeleteನನ್ನ ಬ್ಲಾಗಿಗೆ ಭೇಟಿ ಕೊಟ್ಟಿದ್ದಕ್ಕೆ ಮತ್ತು ಚಿತ್ರಗಳನ್ನು ಆನಂದಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ನಾನು ಚಿರಋಣಿ. ಬ್ಲಾಗನ್ನು ಆಗಾಗ ಅಪ್‌ಡೇಟ್ ಮಾಡಲು ಪ್ರಯತ್ನಿಸುತ್ತೇನೆ. ಹೀಗೆಯೇ ಬರುತ್ತಾ ಇರಿ.
beautiful pics maga..
ReplyDeleteಥ್ಯಾಂಕ್ಸ್ ಸಂತೂ, ನಿನ್ನನ್ನ ಇಲ್ಲಿ ನೋಡಿ ಸಂತೋಷ ಆಯ್ತು ಕಣೋ...ಆಗಾಗ ಬರುತ್ತಾ ಇರು.
ReplyDeletegreat pics..nodidre nangu hogbeku annista ide :)
ReplyDeleteಖಂಡಿತ ಹೋಗಿ ಬನ್ನಿ ಸುಮನ ಮೇಡಮ್, ತುಂಬಾ ಒಳ್ಳೇ ತಾಣ. ಅಲ್ಲಿ ಹೋದರೆ ವಿಶೇಷವಾಗಿ ಸೂರ್ಯೋದಯ, ಸೂರ್ಯಾಸ್ತಗಳನ್ನು ಮಿಸ್ ಮಾಡ್ಕೊಬೇಡಿ. ಪಕ್ಕದಲ್ಲೇ ಕೊಲ್ಲೂರು - ಮೂಕಾಂಬಿಕಾ ದೇವಸ್ಥಾನವಿದೆ. ಕೆಲವು ಜಲಪಾತಗಳಿವೆ. ಒಟ್ಟಿನಲ್ಲೇ ಒಮ್ಮೆ ನೋಡಲೇಬೇಕಾದ ಜಾಗ.
ReplyDeleteಬ್ಲಾಗಿಗೆ ಭೇಟಿ ಕೊಟ್ಟು ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು.
ನನ್ನ ಊರು ಇರುವುದು ಇಲ್ಲೇ ಹತ್ತಿರದಲ್ಲೇ... ಒಳ್ಳೆ ಸಮಯದಲ್ಲೇ ಇಲ್ಲಿಗೆ ಭೇಟಿ ನೀಡಿದ್ಧೀರ.. ಒಮ್ಮೆ ಮಳೆಗಾಲದ ಸಮಯದಲ್ಲೂ ಭೇಟಿ ನೀಡಿ.. ಹೊಸ ಪ್ರಪಂಚವನ್ನ ನೀವು ನೋಡುತ್ತೀರ... ಆದರೆ ಸ್ವಲ್ಪ ಎಚ್ಚರಿಕೆ ವಹಿಸುವುದು ಅವಶ್ಯಕ...
ReplyDeleteನನ್ನ ಊರು ಕೂಡಾ ಧಾರವಾಡ ... ನಿಮ್ಮ ಈ ಬ್ಲಾಗ್ ನೋಡಿ ತುಂಬಾ ಕುಸಿ ಆಯಿತು ... ನಾನು ಕೂಡ ಹೋಗಿ ನೋಡಿ ಬಂದೆ ನಿಮ್ಮ ದಯದಿಂದ. ತುಂಬಾ ಧನ್ಯವಾದಗಳು.
ReplyDelete