ಈಕೆ ನನ್ 'ಗರ್ಲ್-ಫ್ರೆಂಡು'; ಹೆಸ್ರು "ನೀಲಾ" ಅಂತ; ನನ್ನ ಒಡಹುಟ್ಟಿದ ಸಹೋದರಿಯ ಮಗಳು. ಈಕೆಯ ಇತ್ತೀಚಿನ ಭಾವಚಿತ್ರ ಸಿಗದ ಕಾರಣ ಈಕೆ ಎರಡು ವರ್ಷದ ಮಗುವಾಗಿದ್ದಾಗಿನ ಫೋಟೋನೇ ಹಾಕಿದೀನಿ.
ನೋಡೋದಕ್ಕೆ ಒಳ್ಳೇ ಪ್ರಿನ್ಸೆಸ್ ಥರಾ ಇದಾಳಲ್ವಾ?
ನಾವಿಬ್ರೂ ಪರಸ್ಪರ ತುಂಬಾ ಪ್ರೀತಿಸ್ತಿದೀವಿ; ನಾನು ಮದ್ವೆ ಅಂತ ಆದ್ರೆ ಇವಳನ್ನೇ ಅಂತ ಡಿಸೈಡ್ ಮಾಡಿದೀನಿ. ನೋಡೋಕೂ ಚೆನ್ನಾಗಿದಾಳೆ. ನನ್ನ ಒಡಹುಟ್ಟಿದ ಸಹೋದರಿಯ ಮಗಳಾದ್ದರಿಂದ ಜಾತಿ ಸಮಸ್ಯೆಯೂ ಇಲ್ಲ. ನಾನು ಇವಳನ್ನ ಮದ್ವೆ ಆಗೋಕೆ ನಂ ಮನೇಲಿ ಯಾರ ಅಭ್ಯಂತರವೂ ಇಲ್ಲ. ಸೋ ನಂ ಇಬ್ರ ಮದ್ವೇಗೆ ಯಾವುದೇ ಆತಂಕಾನೂ ಇರಲ್ಲ ಅಂದ್ಕೊಂಡಿದ್ದೆ.
ನನ್ನ ಮದ್ವೆ ಆಗೋಕೆ ಎರಡು ವರ್ಷದವಳು ಇದ್ದಾಗಿಂದಲೇ ಕೈಯಲ್ಲಿ ಹೂ ಹಿಡಿದು ಕಾಯ್ತಿದಾಳೆ...
ಎಲ್ಲಾ ಓಕೇ .. ಆದ್ರೆ ಇವಳ ಮನೇಲಿ ಇವಳ ಅಪ್ಪನದು ಒಬ್ಬನದೇ ತಕರಾರು; "ಬೇಡ, ಇಬ್ಬರಿಗೂ ವಯಸ್ಸಿನ ಅಂತರ ಜಾಸ್ತಿ" ಅಂತಿದಾನೆ. ಪ್ರೀತಿಗೆ ವಯಸ್ಸಿನ ಹಂಗು ಬೇಕೇ? ನೀವಾದ್ರೂ ಅವಳ ಅಪ್ಪನಿಗೆ ಸ್ವಲ್ಪ ಬುದ್ಧಿ ಹೇಳ್ತೀರಾ ಪ್ಲೀಸ್...
"ನನ್ನ ಮತ್ತು ಉಮಿ ಮಾಮಾನ ಮದ್ವೇಗೆ ಅಪ್ಪನನ್ನು ಹೆಂಗೆ ಒಪ್ಸೋದು?"
ಅಂದ್ ಹಾಗೆ ಇವತ್ತು ಈಕೆಯ ನಾಲ್ಕನೆಯ ವರ್ಷದ ಹ್ಯಾಪೀ ಬರ್ತ್‌ಡೇ; ವಿಶ್ ಯೂ ಅ ವೆರೀ ಹ್ಯಾಪೀ ಬರ್ತ್ ಡೇ ಪುಟ್ಟಾ! ಆದಷ್ಟು ಬೇಗ ಆ ದೇವ್ರು ನಿಮ್ ಅಪ್ಪನ್ಗೆ ಒಳ್ಳೇ ಬುದ್ಧಿ ಕೊಟ್ಟು, ನಮ್ಮಿಬ್ಬರ ಮದ್ವೇಗೆ ಒಪ್ಪೋ ತರ ಆಗ್ಲೀ ಅಂತ ಬೇಡ್ಕೋತೀನಿ :) .
ನೀವೂ ವಿಶ್ ಮಾಡ್ತೀರಾ ಅಲ್ವಾ ? :)
'
ಹಹಹಹ ಏನ್ರೀ ನಿಮ್ ತರ್ಲೆ...ನಿಮ್ ಭಾವನ ನಂಬರ್ ಕೊಡ್ರೀ ನಾವು ಒಪ್ಪಿಸ್ತೀವಿ.
ReplyDeleteನೀಲಾ ಪುಟ್ಟಾ...
ಬೆಳ್ಮುಗಿಲ ಮೆರವಣಿಗೆಯಲಿ
ಅಂಕಿ ಮೀರಿದ ಮುಗಿಲ
ಎಳೆ ಎಳೆಗಳನೆಣಿಸುತಾ
ಹಾಡ ಗುನುಗುತಾ ಸಾಗುವ
ಶಶಿ ನೀನಾಗು ಪುಟ್ಟಾ
-ಹುಟ್ಟುಹಬ್ಬದ ಶುಭಾಶಯಗಳು..ಬದುಕ ತುಂಬಾ ಖುಷಿಯ ಮಲ್ಲಿಗೆಯಿರಲಿ
-ಧರಿತ್ರಿ
ಧರಿತ್ರಿ,
ReplyDeleteಏಪ್ರಿಲ್ ಫೂಲ್ ದಿನವೇ ನನ್ನ ಪುಟ್ಟ 'ಗರ್ಲ್-ಫ್ರೆಂಡ್'ಳ ಬರ್ತ್ ಡೇ ಇದ್ದುದರಿಂದ ಸುಮ್ನೇ ಸ್ವಲ್ಪ ತರ್ಲೆ ಮಾಡೋಣ ಅನ್ನಿಸ್ತು, ಅದ್ಕೆ ಈ ಪೋಸ್ಟ್.
ಸುಂದರ ಪದ್ಯದೊಂದಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಿದ ನಿಮಗೆ, ನನ್ನ ಮತ್ತು ನನ್ನ 'ಗರ್ಲ್ ಫ್ರೆಂಡ್' ನೀಲಾ ಕಡೆಯಿಂದ ತುಂಬಾ ತುಂಬಾ ಥ್ಯಾಂಕ್ಸ್ :)
ಧನ್ಯವಾದಗಳು
-ಉಮೇಶ್
ನಿಮ್ಮ ಗರ್ಲ್ ಫ್ರೆ೦ಡ ಗೆ ನನ್ನ ಕಡೆಯಿ೦ದನೂ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ReplyDeleteಥ್ಯಾಂಕ್ ಯೂ ವಿನುತಾ ಮೇಡಂ! :)
ReplyDeleteBelated happy birthday....!
ReplyDeleteತುಮ್ಬಾ ಕ್ಯೂಟ್ ಇದ್ದಾಳೆ ಪುಟ್ಟಿ....
ನಮ್ಮ ಶುಭಾಶೀರ್ವಾದಗಳು...
ಪ್ರಕಾಶ್ ಸರ್,
ReplyDeleteನೋಡೋದಕ್ಕೆ ಎಷ್ಟು ಕ್ಯೂಟ್ ಇದಾಳೋ ಮಾತಿನಲ್ಲಿ ಅಷ್ಟೇ ಚೂಟಿ ಸರ್ ಅವ್ಳು. "ಚಪಾತಿ ಮತ್ತು ಎರಡು ವಿಧದ ಪಲ್ಯ ಮಾಡೋಕೆ ಕಲಿತುಕೊ, ನಾ ನಿನ್ನನ್ನೇ ಮದ್ವೆ ಆಗ್ತೀನಿ" ಅಂದ್ರೆ, "ನಾನು ಚಪಾತಿ ಮಾತ್ರ ಮಾಡಿ ಕೊಡ್ತೀನಿ, ಪಲ್ಯ ಬೇಕಿದ್ರೆ ನೀನೇ ಮಾಡಿಕೊ" ಅಂತಾಳೆ!
ಶುಭಾಶೀರ್ವಾದಗಳಿಗೆ ಧನ್ಯವಾದಗಳು.
-ಉಮೀ
ಉಮಿ :-) ಅವರೆ...
ReplyDeleteನೀಲಾಪುಟ್ಟಿಗೆ ಬಿಲೇಟೆಡ್ ಹ್ಯಾಪೀ ಬರ್ಥ್ ಡೇ :-)
ಅಂದಹಾಗೆ ನೀಲಾಪುಟ್ಟಿ ಹುಟ್ಟಿದ್ದು ಎಪ್ರಿಲ್ ಒಂದನೇ ತಾರೀಖಾ? ಅದೇ ದಿನದಂದು ನನ್ನ ಮಗ ಅನುದೀಪ ಸಹ ಹುಟ್ಟಿದ್ದು.
ಧನ್ಯವಾದಗಳು ಶಾಂತಲಾ ಮೇಡಮ್,
ReplyDeleteಹೌದು, ನೀಲಾ ಹುಟ್ಟಿದ್ದು ಏಪ್ರಿಲ್ ಒಂದರಂದು. ಓಹ್ ಅನುದೀಪ ಸಹ ಅದೇ ದಿನಾಂಕದಂದು ಹುಟ್ಟಿದ್ದಾ!? ಅನುದೀಪ ಪುಟ್ಟಾಗೆ ನನ್ನ ಕಡೆಯಿಂದ ಬಿಲೇಟೆಡ್ ಬರ್ತ್ ಡೇ ವಿಶಸ್ :)
- ಉಮೀ