Tuesday, September 1, 2009

ಕಟು ಸತ್ಯ

'
ನನ್ನ ಮೊಟ್ಟಮೊದಲ ಬ್ಲಾಗ್ ಪೋಸ್ಟ್ ನಲ್ಲಿ ತಮಿಳರ ಭಾಷಾ ದುರಭಿಮಾನ ಮತ್ತು ಬೆಂಗಳೂರಿನ ಬಗ್ಗೆ ಬರೆದಿದ್ದೆ. ಬೆಂಗಳೂರಿನಲ್ಲಿ ತಮಿಳರ ಪ್ರಭಾವ ಎಷ್ಟರಮಟ್ಟಿಗಿದೆ ಎಂಬುದನ್ನು ಸ್ವಂತ ಅನುಭವವೊಂದನ್ನು ಆಧಾರವಾಗಿಟ್ಟುಕೊಂಡು ಆ ಪುಟ್ಟ ಲೇಖನದಲ್ಲಿ ಹೇಳಿದ್ದೆ. ಆ ಕಟು ಸತ್ಯವನ್ನು ಪುಷ್ಟೀಕರಿಸುವಂತಹ ಈ-ಮೈಲ್ ಫಾರ್ವರ್ಡ್ ಒಂದು ನಿನ್ನೆ ಸ್ನೇಹಿತನೊಬ್ಬನಿಂದ ಬಂತು.

ಬೆಂಗಳೂರಿನಲ್ಲಿ ಕನ್ನಡಕ್ಕೆ ಒದಗಿರುವ ದುಸ್ಥಿತಿಯನ್ನು ಬಿಂಬಿಸುವ ಈ ಚಿತ್ರವನ್ನು ನೋಡಿ ನಗಬೇಕೋ ಅಳಬೇಕೋ ಗೊತ್ತಾಗ್ಲಿಲ್ಲ.

'ಈ ಕಾರ್ಟೂನ್ ಚಿತ್ರಿಸಿದ ರಾಮಧ್ಯಾನಿ ಅವರಿಗೆ ಧನ್ಯವಾದಗಳು.

11 comments:

  1. ಉಮೇಶ್
    ಇಷ್ಟೊಂದು ಒಳ್ಳೆಯ ವ್ಯಂಗ್ಯಚಿತ್ರವನ್ನು ನೋಡಿ ನಗುವುದೋ ಅಳುವುದು ತಿಳಿಯದಾಗಿದೆ. ನಿಜವಾಗಿಯೂ ಇದೊಂದು ಅರ್ಥಪೂರ್ಣ ವ್ಯಂಗ್ಯಚಿತ್ರ. ನಿಮಗೂ ರಾಮಧ್ಯಾನಿ ಅವರಿಗೂ ಅಭಿನಂದನೆಗಳು

    ReplyDelete
  2. ಉಮೇಶ,
    ಕನ್ನಡ ನಾಡು ತಮಿಳು,ಮರಾಠಿ, ತೆಲಗು ಹಾಗೂ ಮಲೆಯಾಳಿ ಭಾಷಾ ದುರಭಿಮಾನಿಗಳಿಂದ ಸುತ್ತುವರಿಯಲ್ಪಟ್ಟಿದೆ. ಅನೇಕ ವರ್ಷಗಳ ಹಿಂದೆ ನನ್ನ ಆರು ವರ್ಷದ ತಮ್ಮ ಕೊಲ್ಲಾಪುರಕ್ಕೆ ಹೋಗಿದ್ದ. ಅಲ್ಲಿ ರಸ್ತೆಯ ಬದಿಯಲ್ಲಿ ನಿಂತಿದ್ದ ಪೋಲೀಸನಿಗೆ ಈತ ಹಿಂದಿಯಲ್ಲಿ ಕೇಳಿದ directionsಗೆ ಆತ ನೀಡಿದ ಉತ್ತರ:
    "ಬಾಳಾ, ಇಥ ಮರಾಠೀ ಚಾಲೇಲ!"
    ಉತ್ತಮ ಕಾರ್ಟೂನ್ ಆರಿಸಿ ಕೊಟ್ಟಿದ್ದೀರಿ.

    ReplyDelete
  3. ಉಮೇಶ್ ಸರ್,

    ರಾಮಧ್ಯಾನಿಯವರ ವ್ಯಂಗ್ಯ ಚಿತ್ರದಲ್ಲಿ ಇಷ್ಟೊಂದು ಅರ್ಥವಿದೆಯಲ್ಲಾ...ಕಟುವಾಸ್ತವವನ್ನು ಹಾಗೆ ಬಿಂಬಿಸಿದ್ದಾರೆ...

    ReplyDelete
  4. ಉಮೇಶ್,
    ಅರ್ಥಪೂರ್ಣ ಚಿತ್ರ....
    ಅಭಿನಂದನೆಗಳು...

    ReplyDelete
  5. ಉಮೇಶ್..ಇದರ ಬಗ್ಗೆ ಹೇಳಿ, ಕೇಳಿ ಸಾಕಾಗಿದೆ. ಮತ್ತೊಬ್ರರನ್ನು ದೂರೋ ಬದಲು ಕನ್ನಡಿಗರದಾದ ನಾವು ಎಚ್ಚೆತ್ತುಕೊಳ್ಳಬೇಕು. ಆದರೆ ನಾವು-ನೀವು ಎಚ್ಚೆತ್ತುಕೊಂಡ್ರೆ ಪ್ರಯೋಜನವೇನು ಹೇಳಿ? ಅಲ್ವೇ? ಕನ್ನಡಿಗರ ಅಂಧಾಭಿಮಾನವೇ ಇಂದು ಇನ್ನೊಂದು ರಾಜ್ಯದವರು ಇಲ್ಲಿ ಪ್ರಬಲವಾಗಿ ಬೆಳೆಯಲು ಕಾರಣ ಆಗೋದು. ಏನಂತೀರಿ?
    -ಧರಿತ್ರಿ

    ReplyDelete
  6. ಆತ್ಮೀಯ ಉಮೇಶರೇ.

    ಆ ಒಂದು ಚಿತ್ರ ನನಗೆ ೫೦ ಪುಟಗಳ ಒಂದು ಪುಸ್ತಕ ಓದಿದಷ್ಟು ಅನುಭವ ನೀಡ್ತು.
    ಧನ್ಯವಾದಗಳು

    ReplyDelete
  7. @ಸತ್ಯನಾರಾಯಣ ಸರ್,
    ವ್ಯಂಗಚಿತ್ರಗಳೇ ಹಾಗಲ್ಲವೇ, ಅವು ಕಹಿಸತ್ಯವನ್ನು ವಿಡಂಬನಾತ್ಮಕವಾಗಿ ಬಿಂಬಿಸುತ್ತವೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    @ಸುನಾಥ ಅಂಕಲ್,
    ಹೌದು, ಗಡಿಭಾಗದ ಯಾವುದೇ ಜಿಲ್ಲೆಗೆ ಹೋದರೂ ಪಕ್ಕದ ರಾಜ್ಯದ ಭಾಷೆಯ ಪ್ರಭಾವ ಎಲ್ಲೆಲ್ಲೂ ಕಾಣಸಿಗುತ್ತದೆ. ನಾನೊಮ್ಮೆ ಬಸವಕಲ್ಯಾಣಕ್ಕೆ ಹೋದಾಗಲೂ ಅಲ್ಲಿ ಕನ್ನಡದಲ್ಲಿ ಕೇಳಿದ ಪ್ರಶ್ನೆಗಳಿಗೆ ವಾಪಸ್ ಹಿಂದಿ ಅಥವಾ ಮರಾಠಿಯಲ್ಲಿ ಉತ್ತರಿಸುತ್ತಿದ್ದುದು ಕಂಡುಬರುತ್ತಿತ್ತು. ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು.

    @ಶಿವು ಸರ್,
    ಹೌದು, ಇದುವೇ ಕಟುವಾಸ್ತವ. ರಾಮಧ್ಯಾನಿಯವರ ಜಾಣ್ಮೆಯನ್ನು ಮೆಚ್ಚಬೇಕಾದ್ದೇ. ನಿಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.

    @ಸವಿಗನಸು,
    ಚಿತ್ರವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು.

    @ಬಿಳಿಮುಗಿಲು,
    ಹೌದು, ಸತ್ಯ ಕಹಿಯಾಗಿದೆ, ಆದರೆ ಅದುವೇ ನಿತ್ಯಸತ್ಯ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    @ಧರಿತ್ರಿ,
    ಅಂಧಾಭಿಮಾನ ಅನ್ನೋ ಬದಲು ಅಭಿಮಾನಶೂನ್ಯತೆ ಅಂದ್ರೆ ಸರಿಯಾಗಿರುತ್ತೇನೋ. ನಿಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ ವಂದನೆಗಳು.

    @ಲೋಹಿತ್,
    ಹೌದು, ಅದೊಂದು ತುಂಬಾ ಅರ್ಥಪೂರ್ಣ ಚಿತ್ರ, ಅದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲೆಂದೇ ಬ್ಲಾಗಲ್ಲಿ ಪೋಸ್ಟ್ ಮಾಡಿದೆ. ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು

    ReplyDelete
  8. it was amezing sir
    it's 100 persant right .........

    ReplyDelete