ಸ್ನೇಹಿತನೊಬ್ಬ ಈ-ಮೇಲ್ ನಲ್ಲಿ ಕಳಿಸಿದ್ದು...
ಎರಡು ಗಂಡು ಕತ್ತೆಗಳು ಪರಸ್ಪರ ಮಾತನಾಡಿಕೊಳ್ಳುತ್ತಿರುತ್ತವೆ:
ಎರಡು ಗಂಡು ಕತ್ತೆಗಳು ಪರಸ್ಪರ ಮಾತನಾಡಿಕೊಳ್ಳುತ್ತಿರುತ್ತವೆ:
ಒಂದು ಕತ್ತೆ: "ಗೆಳೆಯ, ನನ್ನ ಯಜಮಾನ ನನಗೆ ವಿಪರೀತ ಹೊಡೆದು ಹಿಂಸೆ ಕೊಡುತ್ತಾನೆ."
ಎರಡನೆ ಕತ್ತೆ: "ಹಾಗಿದ್ದರೆ ನೀನು ಓಡಿ ಹೋಗಬಾರದೇಕೆ?"
ಮೊದಲ ಕತ್ತೆ: "ಓಡಿ ಹೋಗಬಹುದಿತ್ತು, ಆದರೆ ಇಲ್ಲಿ ನನಗೆ ಉತ್ತಮ ಭವಿಷ್ಯವಿದೆ... ಯಜಮಾನನ ಸುಂದರ ಮಗಳು ತುಂಟತನ ಮಾಡಿದಾಗಲೆಲ್ಲ ಯಜಮಾನ ಅವಳಿಗೆ ಹೇಳುತ್ತಿರುತ್ತಾನೆ - 'ನಿನ್ನ ಮದುವೆ ಕತ್ತೆ ಜೊತೆ ಮಾಡುತ್ತೇನೆ...!' ಎಂದು. ನಾನು ಅದೇ ಆಶಾವಾದದಿಂದ ಇಲ್ಲಿಯೇ ಇದ್ದೇನೆ."
'
ಆಶಾವಾದಿಯಾಗಿರೋದ್ರಿಂದ ನಮ್ಮ ಭವಿಷ್ಯ ಉತ್ತಮವಾಗದೆ ಇರಬಹುದು. ಆದರೆ ಅದು ಸದ್ಯದ ನಮ್ಮ ಕಷ್ಟವನ್ನು ಇನ್ನಷ್ಟು ಸಹ್ಯವಾಗಿಸುತ್ತೆ.
ಆಶಾವಾದಿತನ ಅಂದ್ರೆ ಇದೇ ಇರಬಹುದೇನೋ :)
'
ನಾವೂ ಆಶಾವಾದಿಯಾಗಿರೋಣ
ReplyDeleteಉಮೇಶ್ ಸರ್,
ReplyDeleteಖಂಡಿತ..ಇದನ್ನು ನಾನಂತೂ ಪಾಲಿಸುತ್ತೇನೆ..
@ಸತ್ಯನಾರಾಯಣ ಸರ್,
ReplyDeleteಹೌದು, ನಾವೂ ಆಶಾವಾದಿಗಳಾಗಿದ್ದರೇನೇ ಬದುಕು ಸಹನೀಯ ಅನಿಸುವುದು. ಪ್ರತಿಕ್ರಿಯೆಗೆ ವಂದನೆಗಳು.
@ಶಿವು ಸರ್,
ನನ್ನ ಅನಿಸಿಕೆಗೆ ಧ್ವನಿಗೂಡಿಸಿದ್ದಕ್ಕೆ ಧನ್ಯವಾದಗಳು.
ನಮ್ ಮ್ಯಾನೇಜರ್ ಒಂದ್ಸಾರಿನು ಹೀಗೆ ಹೇಳಿಲ್ಲ :(
ReplyDelete@ಶಿವಪ್ರಕಾಶ್,
ReplyDeleteಇವತ್ತಲ್ಲ ನಾಳೆ ಹೇಳಬಹುದು.. ಆಶಾವಾದಿಯಾಗಿರಿ :)
ಆ ಕತ್ತಿಗೂ ಎಂಥಾ ಆಶಾ ನೋಡರಿ...ನೀವು ನನ್ನ ಬ್ಲಾಗಗೂ ಭೇಟಿಕೊಡ್ರಿ..www.usdesai.blogspot.com
ReplyDelete@ಉಮೇಶ್ ದೇಸಾಯಿ ಯವರೇ,
ReplyDeleteಆಶಾ ಯಾರಿಗೆ ಇರೂದಿಲ್ಲ ಹೇಳ್ರೀ.. ಅದು ಇರೋದ್ರಿಂದೆನೇ ಬದುಕು ನಡೀತಾ ಅದ ಅಲ್ರೀ..
ಖಂಡಿತ ನಿಮ್ ಬ್ಲಾಗಿಗೆ ಭೇಟಿ ಕೊಡತೇನ್ರೀ.. ಧನ್ಯವಾದಗಳು :)
ಹೌದು ಆಶಾವಾದಿತನ ಒಳ್ಳೆಯದು . ಅದು ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ಅದು ಬಹಳ ಮುಖ್ಯ .
ReplyDelete@ರೂಪಾರವರೆ,
ReplyDeleteಹೌದು, ಸದ್ಯದ ಪರಿಸ್ಥಿತಿಲಿ ಆಶಾವಾದಿಯಾಗಿರೋದ್ರಿಂದ ನಮ್ಮ ಮನೋಸ್ಥೈರ್ಯ ಹೆಚ್ಚುವುದರಲ್ಲಿ ಸಂದೇಹವಿಲ್ಲ. ಪ್ರತಿಕ್ರಿಯೆಗೆ ಧನ್ಯವಾದಗಳು.
ಛೇ, ಆ ಕತ್ತೆಗೆ ಇರುವಷ್ಟು ಆಶಾವಾದ ಮನುಜರಾದ ನಮಗಿಲ್ಲವಲ್ಲ. ಇರಲಿ, ತಮಾಷೆಯಾಗಿದೆ
ReplyDeleteಹಾಯ್ ದೀಪಸ್ಮಿತ,
ReplyDeleteಪ್ರತಿಕ್ರಿಯೆಗೆ ವಂದನೆಗಳು :)
ಆಶಾವಾದ ಇರಲೇಬೇಕು. ಇಲ್ಲದಿದ್ದರೆ ಜೀವನ ಮುಳ್ಳಿನ ಹಾಸಿಗೆ. ಒಳ್ಳೆ ಕಥೆ.morel ಕೂಡ.
ReplyDeleteಮಲ್ಲಿಕಾರ್ಜುನ್,
ReplyDeleteನನ್ನ ಬ್ಲಾಗಿಗೆ ಭೇಟಿ ಕೊಟ್ಟು ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು.ಹೀಗೇ ಬರುತ್ತ ಇರಿ. :)
hahahaha... super aashavvadi katte....
ReplyDeleteಹಹ! ಇನ್ನೊಂದು ಹಾಸ್ಯ ಎಂದರೆ, ಆ ಕತ್ತೆಗಿರೋ ಆಶಾವಾದ ಆ ಯಜಮಾನನಿಗಿಲ್ಲ. ;)
ReplyDelete@ರವಿಕಾಂತರವರೆ,
ReplyDeleteಪ್ರತಿಕ್ರಿಯೆಗೆ ವಂದನೆಗಳು.
@ಚಂದ್ರಿಕಾ,
ನಮ್ಮಲ್ಲಿರೋ ಆಶಾವಾದ ಎಚ್ಚೆತ್ತುಕೊಳ್ಳೋದು ನಾವು ತೊಂದರೆ ಅನುಭವಿಸುವಾಗ ಮಾತ್ರ, ಅಲ್ಲವೇ :). ಪ್ರತಿಕ್ರಿಯೆಗೆ ವಂದನೆಗಳು.