Monday, April 6, 2009

ಸೋತು ಗೆಲ್ಲುವವರು...

'
ಇನ್ನೇನು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಎಲ್ಲ ಪಕ್ಷಗಳ ಚುನಾವಣಾ ತಯಾರಿ ಜೋರಾಗಿಯೇ ನಡೆದಿರಬೇಕು. ಜಾಗೋ ರೇ, ಲೀಡ್ ಇಂಡಿಯಾ ಮುಂತಾದ ಕ್ಯಾಂಪೇನ್ ಗಳು "ವೋಟ್ ಮಾಡಿ, ವೋಟ್ ಮಾಡಿ" ಅಂತ ಮತದಾನದ ಅಗತ್ಯವನ್ನು ಒತ್ತಿ ಹೇಳುತ್ತಿವೆ. ಮತ ಚಲಾಯಿಸುವುದು ನಮ್ಮ ಹಕ್ಕು ಮತ್ತು ಆದ್ಯ ಕರ್ತವ್ಯ ಎರಡೂ ಹೌದು. ಆದರೆ ನಮ್ಮ ಈ ಮತದಾನದ ವ್ಯವಸ್ಥೆಯಲ್ಲಿ ನನಗೆ ಅರ್ಥವಾಗದ ವಿಷಯವೊಂದಿದೆ. ಅದೇನಂದ್ರೆ "ಸೋತು ಗೆಲ್ಲುವ" ಅಭ್ಯರ್ಥಿಗಳದು.

"ಸೋತು ಗೆಲ್ಲುವವರು" ಅಂದ್ರೆ ಯಾರು ಅಂತೀರಾ? ಒಂದು ಉದಾಹರಣೆ ಸಮೇತ ಹೇಳಲು ಪ್ರಯತ್ನಿಸುತ್ತೇನೆ.

ಒಂದು ಕ್ಷೇತ್ರದಲ್ಲಿ ಒಂದು ಲಕ್ಷ ಮತದಾರರಿದ್ದಾರೆ ಮತ್ತು ಅಲ್ಲಿ ನೂರಕ್ಕೆ ನೂರರಷ್ಟು ಮತದಾನ ನಡೆಯುತ್ತೆ ಎಂದಿಟ್ಟುಕೊಳ್ಳೋಣ. ಚುನಾವಣೆ ನಂತರ ಮೂವರು ಅಭ್ಯರ್ಥಿಗಳಲ್ಲಿ ಮೊದಲ ಇಬ್ಬರಿಗೆ ತಲಾ ಮೂವತ್ತು ಸಾವಿರ ಮತಗಳು ಮತ್ತು ಮೂರನೆಯವನಿಗೆ ನಲವತ್ತು ಸಾವಿರ ಮತಗಳು ಲಭಿಸಿದವು ಎಂದಿಟ್ಟುಕೊಳ್ಳೋಣ. ಈಗ ನಮ್ಮ ಚುನಾವಣಾ ವ್ಯವಸ್ಥೆ ಗೆದ್ದವರು ಯಾರೆಂದು ಘೋಷಿಸುತ್ತೆ? ಮೂರನೆಯವನನ್ನು ತಾನೇ?

ಇಲ್ಲಿ ಗಮನಿಸತಕ್ಕ ಅಂಶವೆಂದರೆ, ಈ ಮೂರನೆಯ ಅಭ್ಯರ್ಥಿ ಆ ಕ್ಷೇತ್ರದ 60% ಮತದಾರರಿಂದ ತಿರಸ್ಕರಿಸಲ್ಪಟ್ಟವನು. ಅವನಿಗೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ದೊರೆತು ಅವನು ವಿಜಯಿಶಾಲಿಯೇ ಆಗಿರಬಹುದು. ಆದರೆ, ಅವನು ತನಗೆ ಮತ ಹಾಕದ 60 ಪ್ರತಿಶತ ಮತದಾರರಿಂದ ತಿರಸ್ಕರಿಸಲ್ಪಟ್ಟವನು ಎಂಬ ಅಂಶ ಮಾತ್ರ ಸುಳ್ಳಲ್ಲ ತಾನೇ? ಇಂಥವರನ್ನೇ ನಾನು "ಸೋತು ಗೆಲ್ಲುವವರು" ಅಂತ ಸಂಭೋದಿಸಿದ್ದು.

ಇದು ನಮ್ಮ ಚುನಾವಣಾ ವ್ಯವಸ್ಥೆಯ ಲೊಪವೇ? ಹೌದಾಗಿದ್ದರೆ, ಇದಕ್ಕೆ ಪರಿಹಾರವೇನು?
'

13 comments:

  1. ನೀವು ಅಂದಿದ್ದು ನಿಜ, ಕೆಲವೊಮ್ಮೆ ನಮ್ಮ ವ್ಯವಸ್ಥೆಯ ದೋಷಗಳನ್ನು ಗೊತ್ತಿದ್ದೂ ಸುಮ್ಮನಿರುವ ಅನಿವಾರ್ಯತೆ ಬರುತ್ತದೆ.

    ReplyDelete
  2. ಉಮೀ ಸರ್,

    ನಿಮ್ಮ ಮಾತು ನಿಜ ಅಂತ ಅನ್ನಿಸುತ್ತೆ...ಈ ವ್ಯವಸ್ಥೆಯನ್ನು ಸರಿಪಡಿಸುವವರು ಯಾರು..ಇದು ನನ್ನ ಪ್ರಶ್ನೆಯೂ ಕೂಡ....

    ReplyDelete
  3. ಉಮೀ....

    ನಿವೆನ್ನುವದು ನಿಜ...

    ಆದರೂ ಪ್ರಜಾಪ್ರಭುತ್ವ ಉತ್ತಮ...

    ಐದುವರ್ಷಕ್ಕೊಮ್ಮೆ ಜನರ ಬಳಿ ಬರುತ್ತಾರಲ್ಲ...

    ನಾಲ್ಕು ದಿನವಾದರೂ ವೋಟಿಗಾಗಿ ಜನರ ಬಳಿ ಇರುತ್ತಾರಲ್ಲ..

    ಅಷ್ಟು ಜನರಾದರೂ ಅವರನ್ನು ಬೆಂಬಲಿಸುತ್ತಾರಲ್ಲ.....

    ತೀರಾ ಪಾಕಿಸ್ತಾನದ ಹಾಗೆ ಗನ್ ಹಿಡಿದು ಬರುವದಿಲ್ಲವಲ್ಲ...

    ಜನಜಾಗ್ರತಿಯಾಗಬೇಕಿದೆ..
    ಆಗುತ್ತಿದೆ...

    ಸಮಯೋಚಿತ ಲೇಖನಕ್ಕೆ
    ಅಭಿನಂದನೆಗಳು..

    (ನಾನು ನಿಮ್ಮ ಬ್ಲಾಗ್ "ಅನುಸರಿಸುತ್ತಿದ್ದೇನೆ"
    ಅದರೂ ನನಗೆ ನಿಮ್ಮ ಹೊಸಲೇಖನಗಳು ಗೊತ್ತಾಗುತ್ತಿಲ್ಲ...!
    ಏಕಿರಬಹುದು...?)

    ReplyDelete
  4. ಈ ಲೋಪಗಳ ಬಗ್ಗೆ ಹೇಳಿ ಪ್ರಯೋಜನವಿಲ್ಲ. ಚುನಾವಣೆ ಬಂದಾಗ ಚುನಾವಣಾ ಆಯೋಗ ಕೆಲವು ಶಬ್ಧಗಳನ್ನಷ್ಟೇ ಬಳಸಬಾರದು ಎಂದು ಪಕ್ಷಗಳಿಗೆ ಸೂಚಿಸುತ್ತದೆ. ಉದಾ: ಮತ, ಚುನಾವಣೆ. ಕ್ಷೇತ್ರ ಮುಂತಾದವುಗಳು. ಒಂದು ಸಮಾವೆಶದಲ್ಲೋ, ಪ್ರಚಾರದಲ್ಲೋ ಬಳಸಿದರೆ ಆತ ನೀತಿ ಸಂಹಿತಿ ಉಲ್ಲಂಘಿಸಿದಂತೆ. ಅಂದರೆ ಓರ್ವ ಬಿಜೆಪಿ ಅಥವಾ ಇನ್ಯಾವ ಪಕ್ಷದವ ನಮ್ಮ ಪಕ್ಷಕ್ಕೆ 'ಮತ' ನೀಡಿ ಎನ್ನುವಂತಿಲ್ಲ. ಆದರೆ ಬಿಜೆಪಿಗೆ ಆಶೀರ್ವಾದ ಮಾಡಿ ಎನ್ನಬಹುದು. ಇಲ್ಲಿ ಮತ ನೀಡಿ ಮತ್ತು ಆಶೀರ್ವಾ್ದ ಮಾಡಿ ಎಂಬುವುದಕ್ಕೆ ವ್ಯತ್ಯಾಸ ೇನು? ಇಂಥ ವ್ಯವಸ್ಥೆಗಳನ್ನೆಲ್ಲಾ ಕಾಣುವಾಗ...60% ಜನರಿಂದ ತಿರಸ್ಕೃತಗೊಂಡವ ಜನಪ್ರತಿನಿಧಿಯಾಗೋದೇನು ವಿಶೇಷ ಅಲ್ಲವೇ? ಎಲ್ಲಿ ನೋಡಿದ್ರೂ ನಮ್ಮ ದೇಶದ ಪ್ರಜಾಪ್ರಭೌಉತ್ವ ವ್ಯವಸ್ಥೆಯಲ್ಲಿ ಮಾತ್ರ ಬರೇ ಲೋಪಗಳೇ ಎದ್ದು ಕಾಣೋದು...

    -ಧರಿತ್ರಿ

    ReplyDelete
  5. article is really meaningful.
    even i have written one in my blog about election.. have a look

    ReplyDelete
  6. Ondu amsha yenu andre ulida ibbaru shekada 70 janarinda tiraskrutaru. alwe ?

    ReplyDelete
  7. ಸಾಗರದಾಚೆಯ ಇಂಚರ,

    ಇಂತಹ ದೋಷಗಳನ್ನು ಸರಿಪಡಿಸುವತ್ತ ನಾವು ಕಾರ್ಯೋನ್ಮುಖರಾಗಬೇಕಿದೆ.

    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  8. ಶಿವು ಸರ್,

    ಅಮೇರಿಕದಲ್ಲಿ ಇರುವಂತೆ, ನಮ್ಮ ದೇಶದಲ್ಲೂ ದ್ವಿಪಕ್ಷ ಪದ್ಧತಿಯನ್ನು ಜಾರಿಗೆ ತಂದರೆ ಈ ದೋಷ ಸರಿಹೋಗಬಹುದೇನೋ. ಆದರೆ, ಇದಕ್ಕೊಂದು ಕ್ರಾಂತಿಯೇ ಆಗಬೇಕು ಅನ್ಸುತ್ತೆ.

    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  9. ಪ್ರಕಾಶ್ ಸರ್,

    ಹ ಹಾ.. ನೀವು ಹೇಳುವುದು ನಿಜ, ನಮ್ಮದು ಪಾಕಿಸ್ತಾನಕ್ಕಿಂತಲೂ ಒಳ್ಳೆಯ ಪರಿಸ್ಥಿತಿಯೇ. ಆದರೆ, ಇರುವ ದೋಷಗಳನ್ನು ಸರಿಪಡಿಸುವುದೂ ಅಷ್ಟೇ ಮುಖ್ಯ ಅಲ್ಲವೇ.

    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  10. ಧರಿತ್ರಿ,

    'ಮತ ನೀಡಿ', 'ಆಶೀರ್ವಾದ ಮಾಡಿ', 'ನಮ್ಮ ಚಿಹ್ನೆಯ ಮೇಲೆಯೇ ನಿಮ್ಮ ಠಸ್ಸೆ ಒತ್ತಿ', ಹೀಗೆ ಏನು ಹೇಳಿದರೂ ಮತದಾರ ಮಾತ್ರ ತನಗೆ "ಇಷ್ಟವಾದ" ಅಭ್ಯರ್ಥಿಗೇ ಮತ ಹಾಕುತ್ತಾನೆ. ಚುನಾವಣೆಯ ಪೂರ್ವದಲ್ಲಿ ಏನೇನೋ ಆಗಬಹುದು, ಆದರೆ ಕೊನೆಯಲ್ಲಿ 60 ಪ್ರತಿಶತ ಜನರಿಂದ ತಿರಸ್ಕೃತ ಅಯೋಗ್ಯನೊಬ್ಬ ಜನಪ್ರತಿನಿಧಿಯಾಗಿ ಆರಿಸಿ ಬರುವುದು ಪ್ರಜಾಪ್ರಭುತ್ವದ ದುರಂತವೇ ಅಲ್ಲವೇ.

    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  11. ಶಮ (minchulli) ,

    ಹೌದು, ನಿಮ್ಮ ಲೇಖನದಲ್ಲಿ ನೀಡಿದ ಸಲಹೆಗಳನ್ನು ಜಾರಿಗೆ ತಂದರೆ ಕೆಲವು ದೋಷಗಳನ್ನು ಸ್ವಲ್ಪಮಟ್ಟಿಗಾದರೂ ಸರಿಪಡಿಸಬಹುದೇನೋ. ಆದರೆ, ಅದಕ್ಕೆಲ್ಲ ಒಂದು ದೊಡ್ಡ ಕ್ರಾಂತಿಯೇ ಆಗಬೇಕು ಅನ್ನಿಸುತ್ತೆ.

    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  12. ಸಂತೂ,

    ಹೌದು ಕಣೋ, ನೀನು ಹೇಳಿದ್ದು ನಿಜ, ಉಳಿದ ಇಬ್ಬರು 70 ಪ್ರತಿಶತ ಮತದಾರರಿಂದ ತಿರಸ್ಕರಿಸಲ್ಪಟ್ಟವರು, ಅದರಲ್ಲಿ ಕಡಿಮೆ (60 ಪ್ರತಿಶತ) ಮತದಾರರಿಂದ ತಿರಸ್ಕರಿಸಲ್ಪಟ್ಟವನೆ ಜಯಶಾಲಿ ಎನ್ನುವುದು ಸ್ವಾಭಾವಿಕ. ಆದರೆ, ನಮ್ಮ ಪ್ರಜಾಪ್ರಭುತ್ವ ವ್ಯವಸ್ತೆಯ ದೋಷವಿರುವುದೇ ಇಲ್ಲಿ. ಒಬ್ಬ ವ್ಯಕ್ತಿ, ಒಂದು ಕ್ಷೇತ್ರದಿಂದ ಜಯಶಾಲಿಯಾಗಿ ಚುನಾಯಿತನಾಗಬೇಕೆಂದರೆ ಆ ಕ್ಷೇತ್ರದ ಕನಿಷ್ಟ 51 ಪ್ರತಿಶತ ಮತದಾರರಿಂದ ಆತ ಮತ ಪಡೆದಿರಬೇಕು ಎಂಬ ನಿಯಮವಿದ್ದರೆ ಚೆನ್ನ ಅಲ್ಲವೇ.

    ದ್ವಿಪಕ್ಷ ಪದ್ಧತಿಯಿಂದ ಮಾತ್ರ ಇಂತಹ ನಿಯಮವನ್ನು ಹೇರುವುದು ಸಾಧ್ಯ ಅಂತ ನನ್ನ ಅನಿಸಿಕೆ. ಆದರೆ, ಇದಕ್ಕೆಲ್ಲ ಮೊದಲೇ ಹೇಳಿದಂತೆ, ಒಂದು ದೊಡ್ಡ ಕ್ರಾಂತಿಯೇ ಆಗಬೇಕಿದೆ.

    ನನ್ನ ಬ್ಲಾಗಿಗೆ ಭೇಟಿ ಕೊಟ್ಟು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಹೀಗೆಯೇ ಬರುತ್ತ ಇರು.

    ReplyDelete