Thursday, January 15, 2009

ತಮಿಳರ ಭಾಷಾ ದುರಭಿಮಾನವೂ, ಬೆಂಗಳೂರೂ...

'
ಮೊನ್ನೆ ಸ್ನೇಹಿತರೊಡನೆ ತಮಿಳುನಾಡಿನ ತಿರುವಣ್ಣಮಲೈಗೆ ಹೋಗಿದ್ದೆ. ಅಬ್ಬಾ, ಯಾವುದೋ ಅನ್ಯಗ್ರಹಕ್ಕೆ ಹೋಗಿ ಬಂದ ಅನುಭವ. ಅಲ್ಲಿಯ ಬಹುಪಾಲು ಜನಕ್ಕೆ ಕನ್ನಡ, ಇಂಗ್ಲೀಷ್, ಹಿಂದಿ ಬರಲ್ಲ, ನಮಗೆ ಇವಷ್ಟನ್ನು ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ಅದೇನು ತಮಿಳರ ಭಾಷಾ ದುರಭಿಮಾನ! ಯಾವಾಗ ವಾಪಸ್ ಕರ್ನಾಟಕಕ್ಕೆ ಬರುತ್ತೇನೋ ಅನ್ನಿಸುತ್ತಿತ್ತು. ದೇವರ ದರ್ಶನದ ನಂತರ ಅಲ್ಲಿಯೇ ಹತ್ತಿರದ ಸಾತನೂರು ಡ್ಯಾಮ್ ನೋಡಲು ಹೋಗಿದ್ದೆವು. ಅಲ್ಲಿ, ಕೃತಕ ಸರೋವರವೊಂದರಲ್ಲಿ ಪೆಡಲ್ ಬೋಟ್ ಮಜ ಅನುಭವಿಸಿ ವಾಪಸ್ ಬರುವಾಗ ಅಲ್ಲಿಯ ಒಬ್ಬ ಮಹಿಳೆ ನನ್ನ ಸ್ನೇಹಿತನೊಬ್ಬನಿಗೆ "ಯಾವೂರು" ಅಂತ ತಮಿಳಿನಲ್ಲಿ ಕೇಳಿದಳು. ಅವನು ಕನ್ನಡದಲ್ಲಿಯೇ "ನಾವು ಬೆಂಗಳೂರಿನವರು" ಅಂದ. ಅದಕ್ಕೆ ಆಯಮ್ಮ, ತಮಿಳಿನಲ್ಲಿಯೇ "ಬೆಂಗಳೂರಿನವರಾಗಿದ್ದುಕೊಂಡು ತಮಿಳು ಬರಲ್ಲವೇ" ಅನ್ನಬೇಕೆ!? ನನಗೆ ಮೈಯೆಲ್ಲ ಉರಿದು ಹೋಯಿತು; ನನಗೆ ಬರುತ್ತಿದ್ದ ಹರಕು ಮುರುಕು ತಮಿಳಿನಲ್ಲಿಯೇ "ಬೆಂಗಳೂರೇನ್ ತಮಿಳುನಾಡಲ್ ಇರಕ್ಕಾ" ಅಂತ ಕೇಳಿದೆ. ಆಯಮ್ಮನಿಗೆ ಅದೇನು ಅರ್ಥವಾಯಿತೋ, ಏನೋ, ನಮ್ಮನ್ನೇ ಪಿಳಿ ಪಿಳಿ ನೋಡುತ್ತ ನಿಂತಳು. ನಾವು ಇವರ ಸಹವಾಸವೇ ಸಾಕಪ್ಪ ಅಂತ ಬೆಂಗಳೂರಿಗೆ ವಾಪಸ್ಸಾದೆವು.

ಎರಡು ತಿಂಗಳು ದೂರದ ಅಮೇರಿಕದಲ್ಲಿ ಇದ್ದಾಗಲೂ ಒಂದು ದಿನ ಪಕ್ಕದ ತಮಿಳುನಾಡಿನಲ್ಲಿ ಇದ್ದಷ್ಟು ಕಷ್ಟ ಆಗಿರಲಿಲ್ಲ.
'

6 comments:

  1. ಇಂಥಹ ಅನುಭವ ನನಗೂ ಆಗಿದೆ...

    ಭಾಷಾ ದುರಭಿಮಾನ ಇರಬಾರದು...

    ಚಿಕ್ಕವಾಗಿ, ಚೊಕ್ಕವಾಗಿ ಬರೆದಿದ್ದೀರಿ...

    ಇಷ್ಟವಾಯಿತು...

    ವಂದನೆಗಳು...

    ReplyDelete
  2. ಪ್ರತಿಕ್ರಿಯೆಗೆ ಧನ್ಯವಾದಗಳು, ಪ್ರಕಾಶ್ ಸರ್ :)

    ReplyDelete
  3. ಉಮಿ ಸಾರ್,

    ನನಗೂ ಇಂಥ ಅನುಭವಗಳು ಮದುರೈ ಥೇಣಿಯಲ್ಲೆಲ್ಲಾ ಅಗಿದೆ....ಅದಕ್ಕೆ ನನ್ನ ದಿನಪತ್ರಿಕೆ ವಿತರಣೆಯ ಹುಡುಗರು ಎಲ್ಲರು ತಮಿಳು ಹುಡುಗರು...ಅವರು ತಮಿಳು ಮಾತಾಡಿದರೂ ನಾನು ಕನ್ನಡ ಮಾತಾಡುತ್ತೇನೆ....ಅವರಿಗೆ ಸಿಟ್ಟು ಬರುವ ಮಟ್ಟಿಗೆ....

    ನೀವು ನನ್ನ ಬ್ಲಾಗನ್ನು ಹಿಂಬಾಲಿಸುತ್ತಿರುವುದಕ್ಕೆ ಥ್ಯಾಂಕ್ಸ್...ನನ್ನ ಹಿಂದಿನ ಲೇಖನಗಳನ್ನು ಓದಿದರೆ ೧೦೦ % ಖುಷಿ ಗ್ಯಾರಂಟಿ.....ಓದಿ ಕಾಮೆಂಟ್ ಮಾಡಿ....ನಾನು ನಿಮ್ಮ ಬ್ಲಾಗಿಗೆ ಬರುತ್ತಿರುತ್ತೇನೆ....

    ReplyDelete
  4. ಉಮಿ ಸರ್,

    ಮನಃಪೂರ್ವಕವಾಗಿ ನಗಬೇಕೆ ? ನಡೆದಾಡುವ ಭೂಪಟಗಳ ನೋಡ ಬನ್ನಿ....

    ಪ್ರೀತಿಯಿಂದ...

    ಶಿವು....

    ReplyDelete
  5. ಉಮಿ ,
    ಚೆನ್ನಾಗಿ ಬರೆದಿದ್ದೀರಾ.
    ನನಗೂ ಇಂಥ ಅನುಭವಗಳಾಗಿವೆ. ಅದೂ ಬೆಂಗಳೂರಲ್ಲೇ ! ನನ್ನ ಮೊದಲ ’ ಬಾಸ್’ ಒಬ್ಬ ತಮಿಳರು.ನನಗೋ ತಮಿಳಿನ ಗಂಧ ಗಾಳಿಯೂ ಇಲ್ಲ. ನನಗೆ ತಮಿಳು ಬಾರದೆಂದು ತಿಳಿದಾಗ ಆ ಮಹಾಶಯ ನನಗೆ ಹೇಳಿದ್ದು " ಬೇಗ ತಮಿಳು ಕಲಿತುಕೋ . ಇಲ್ಲ ಅಂದರೆ ನನ್ನ ಡಿಪಾರ್ಟ್ಮೆಂಟ್ ನಲ್ಲಿ ಹೇಗೆ ಕೆಲಸ ಮಾಡ್ತೀಯಾ ? ಎಂದು್. ನನಗೆ , ಮೈಯೆಲ್ಲ ಉರಿದು ’ ಸರ್, ನೀವು ಕರ್ನಾಟಕದ ರಾಜಧಾನಿಯಲ್ಲಿದ್ದೀರಾ , ನನಗೆ ತಮಿಳಿನದಲ್ಲ ,ನಿಮಗೆ ಕನ್ನಡ ಕಲಿಯುವ ಅಗತ್ಯವಿದೆ " ಎಂದು ಒದರಿದ್ದೆ. ಆತ ನನ್ನ " ಬಾಸ್" ಎನ್ನುವುದನ್ನೂ ಮರೆತು.
    ಈ ತಮಿಳರ ದುರಭಿಮಾನದ ಬಗ್ಗೆ ಶ್ರೀ ಬಿ ಜಿ ಎಲ್ ಸ್ವಾಮಿಯವರ ’ ತಮಿಳು ತಲೆಗಳ ನಡುವೆ, ಪ್ರಾಧ್ಯಾಪಕನ ಪೀಠದಲ್ಲಿ ’ ಇತ್ಯಾದಿ ಪುಸ್ತಕಗಳನ್ನು ಓದಿ ನಕ್ಕು ಹಗುರಾಗಿ !

    ReplyDelete
  6. ಪ್ರತಿಕ್ರಿಯೆಗೆ ಧನ್ಯವಾದಗಳು, ಶಿವು ಸರ್ ಮತ್ತು ಚಿತ್ರಾ ಅವರೇ :)ನಿಮ್ಮ ಬಾಸ್ ಗೆನೇ ಆವಾಜ್ ಹಾಕಿದ ನಿಮ್ಮ ಕನ್ನಡ ಪ್ರೇಮ ಮತ್ತು ಧೈರ್ಯವನ್ನು ಮೆಚ್ಚಲೇಬೇಕು ಚಿತ್ರಾ ಮೇಡಮ್.. :)

    ReplyDelete