Tuesday, April 17, 2012

ಅಸಾಧ್ಯ ಅಪೇಕ್ಷೆ

ಒಬ್ಬ ವ್ಯಕ್ತಿ ಮಂಗಳೂರು ಬೀಚಿನ ದಡದ ಮೇಲೆ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದ.

ಇದ್ದಕ್ಕಿದ್ದಂತೆ ಆಕಾಶದಲ್ಲಿ ಅವನ ತಲೆಯ ಮೇಲಿನ ಮೋಡವೆಲ್ಲ ಮುಸುಕುಗಟ್ಟಿ, ಆಕಾಶವಾಣಿಯೊಂದು ತೇಲಿ ಬಂತು -



“ಮಗು, ನಾನು ದೇವರು... ಇಷ್ಟು ದಿನ ನೀನು ನನ್ನ ಮೇಲೆ ಇಟ್ಟಿರುವ ನಂಬಿಕೆಯಿಂದ ನಾನು ಪ್ರಸನ್ನನಾಗಿದ್ದೇನೆ. ನಿನಗೊಂದು ವರ ಕೊಡುತ್ತೇನೆ. ಏನು ಬೇಕೋ ಕೇಳು”

ಆ ವ್ಯಕ್ತಿಗೆ ತುಂಬಾ ಖುಷಿಯಾಯ್ತು.

ತಕ್ಷಣ ಕೇಳಿದ “ನನಗೆ ಇಲ್ಲಿಂದ ಹವಾಯಿ ದ್ವೀಪಕ್ಕೆ ಯಾವಾಗ ಬೇಕೋ ಆವಾಗ ಹೋಗಿ ಬರಲು ಸೇತುವೆಯೊಂದನ್ನು ಕಟ್ಟಿ ಕೊಡು”

ಅದಕ್ಕೆ ದೇವರು -

“ಮಗು, ನಿನ್ನ ಅಪೇಕ್ಷೆ ಅಸಾಧ್ಯವೇನಲ್ಲ, ಆದರೆ ತುಂಬಾ ಲೌಕಿಕವಾದದ್ದು ಮತ್ತು ಸ್ವಾರ್ಥದಿಂದ ಕೂಡಿದ್ದಾಗಿದೆ."

"ಸ್ವಲ್ಪ ಯೋಚನೆ ಮಾಡು – ಅಂಥದ್ದೊಂದು ಸೇತುವೆಯನ್ನು ಕಟ್ಟಲು ಸಪ್ತ ಸಾಗರಗಳಲ್ಲಿ ಬೃಹದಾಕಾರದ ಸ್ತಂಭಗಳನ್ನು ಸ್ಥಾಪಿಸಬೇಕಾಗುತ್ತದೆ..... ಎಷ್ಟೊಂದು ಸಿಮೆಂಟ್ ಮತ್ತು ಉಕ್ಕು ಖರ್ಚಾಗುತ್ತದೆ.... ಅದಕ್ಕೆ ಬೇಕಿರುವ ನೀರು, ಮಾನವ ಸಂಪನ್ಮೂಲ, ವಿದ್ಯುಚ್ಛಕ್ತಿ,.... ಹೆಚ್ಚು ಕಡಿಮೆ ಜಗತ್ತಿನ ಎಲ್ಲ ಸಂಪನ್ಮೂಲಗಳ ವ್ಯಯವಾಗುತ್ತದೆ..."

"ನಿನ್ನೊಬ್ಬನ ಸ್ವಾರ್ಥಕ್ಕಾಗಿ ಅಷ್ಟೊಂದು ಸಂಪನ್ಮೂಲಗಳ ವ್ಯಯ ತರವಲ್ಲ ಮಗು...."

"ನನಗೂ ಕೀರ್ತಿ ತರುವಂಥ ಮತ್ತು ಸಕಲ ಜೀವ ಸಂಕುಲಕ್ಕೆ ನನ್ನ ಮೇಲಿನ ನಂಬಿಕೆ ಇನ್ನೂ ಹೆಚ್ಚಾಗುವಂಥ ಬೇರೆ ಯಾವುದಾದರೂ ವರ ಕೇಳು, ಖುಶಿಯಿಂದ ದಯಪಾಲಿಸುವೆ” ಎಂದ.

ಆ ವ್ಯಕ್ತಿ ತುಂಬಾ ಹೊತ್ತು ಯೋಚನೆ ಮಾಡಿ, ಕಡೆಗೆ ದೇವರಿಗೆ ಮತ್ತೆ ಕೇಳಿದ -

“ದೇವರೇ...... "

"ನನಗೆ ನನ್ನ ಹೆಂಡತಿಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಕೊಡು....."

"ಅವಳ ಅಂತರಂಗವನ್ನು ಅರಿಯುವ ಶಕ್ತಿ ಕೊಡು......"

"ಅವಳು ಸುಮ್ಮನಿದ್ದಾಗ ಏನು ಯೋಚಿಸುತ್ತಿರುತ್ತಾಳೆ,.... "

"ಅವಳು ಏಕೆ ಅಳುತ್ತಾಳೆ,.... "

""ಏನಾಯ್ತು?" ಎಂದು ನಾ ಕೇಳಿದಾಗ ಅವಳು “ಏನೂ ಇಲ್ಲ” ಅಂದಾಗ ಅದರ ಗೂಢಾರ್ಥವೇನು ಎಂದು ಅರಿಯುವ ಶಕ್ತಿ ಕೊಡು....."

"ಒಟ್ಟಾರೆ ಅವಳನ್ನು ಖುಷಿಯಿಂದಿರಿಸುವ ಉಪಾಯವೆನು ಎಂದು ನನಗೆ ತಿಳಿಸಿಕೊಡು.....”



ದೇವರು ಉತ್ತರಿಸಿದ -

“ಮಗು, ನಿನಗೆ ಸೇತುವೆಯ ಮೇಲೆ ದ್ವಿಪಥ ರಸ್ತೆ ಬೇಕೋ ಅಥವಾ ಚತುಷ್ಪಥ ರಸ್ತೆ ಬೇಕೋ?”

-ಇಂಗ್ಲೀಷಿನಿಂದ ಅನುವಾದಿಸಿದ್ದು... ಸುಮ್ನೇ... ತಮಾಷೆಗೆ :-)

ಪ್ರೀತಿಯಿಂದ,

5 comments:

  1. ಹ್ಹ ಹ್ಹ ಹಾ !! ಚೆನ್ನಾಗಿದೆ.. ನೂರಕ್ಕೆ ನೂರು ಸತ್ಯ

    ReplyDelete
  2. ಉಮೇಶ,
    ಭಾಳ ದಿನದ ಮ್ಯಾಲೆ ಬಂದೀರಿ; ಆದರ ಸುಂದರವಾದ ಕಥೀ ಹೊತ್ತು ತಂದೀರಿ.

    ReplyDelete
  3. @ಮಮತಾ,
    ಚುಟುಕು ಕಥೆಯನ್ನ ಮೆಚ್ಚಿದ್ದಕ್ಕೆ ವಂದನೆಗಳು... :-)

    @ಸ್ವರ್ಣ,
    ಬ್ಲಾಗಿಗೆ ಭೇಟಿಕೊಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    @ಸುನಾಥ ಅಂಕಲ್,
    ನಮಸ್ಕಾರ್ರೀ.. ಹೌದ್ರೀ ಅಂಕಲ್, ಕೆಲ್ಸದ ಒತ್ತಡದಾಗ ಬರಿಯೂದ ನಿಲ್ಲಿಸಿಬಿಟ್ಟಿದ್ದೆ ನೋಡ್ರೀ... ಗೆಳ್ಯಾರ ಒತ್ತಾಯಕ್ಕ ಮಣದು ಮತ್ತ ಬರಿಯಾಕ ಶುರು ಮಾಡೇನಿ.. ನಿಮ್ಮ ಪ್ರೋತ್ಸಾಹ ಹಿಂಗ.. ಮುಂದುವರೆಯಲಿ ಅಂತ ಆಶಿಸ್ತೇನ್ರೀ..

    ReplyDelete
  4. ಸರ್,
    ಸೂಪರ್...ಹೆಂಡತಿಯನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಸೇತುವೆ ಕಟ್ಟುವುದೇ ಮೇಲೆ ಅಂತ ದೇವರಿಗೂ ಅನ್ನಿಸಬೇಕಾದರೆ.....

    ReplyDelete