"ಏಕೋ ಕಾಣೆ, ನಂಗೆ ನಾಚ್ಕೆ ಆಗುತ್ತೆ..."
"ಕೆಂಪುತೋಟದ ಕಂದಮ್ಮಗಳು ನಾವು..."
ಹೂವಿನ ಬಾಣದಂತೆ...
"
ನನ್ನ ಹೆಸರಷ್ಟೇ ಡೈನೋಸಾರ್.. ಮೈತುಂಬಾ ಹೂಗಳೇ... "
ಹೂವೊಂದು, ಬಳಿ ಬಂದು, ಸೋಕಿತು ನನ್ನೆದೆಯಾ...
ಬರೀ ಇಷ್ಟೇನಾ ಅನ್ಬೇಡಿ... ಇನ್ನೂ ತುಂಬಾ ಇವೆ. ಎಲ್ಲಾ ಇಲ್ಲೇ ನೋಡಿಬಿಟ್ರೆ ಹ್ಯಾಗೇ :) ... ಲಾಲ್ಬಾಗ್ ಪುಷ್ಪೋತ್ಸವ ಆಗಸ್ಟ್ 15, ಸ್ವಾತಂತ್ರೋತ್ಸವದ ದಿನದವರೆಗೆ ನಡೆಯುತ್ತದೆ. ಒಂದ್ಸಲ ಹೋಗಿ ನೋಡ್ಕೊಂಡು ಬನ್ನಿ.
'
ಪ್ರೀತಿಯಿಂದ,
'
ಒ೦ದು ವಾರ ಹಿ೦ದೆ ಲಾಲ್ ಬಾಗಿಗೆ ಹೋಗಿ ಬ೦ದಿದ್ದೆ. ಒ೦ದು ವಾರ ಬಿಟ್ಟು ಹೋಗಬೇಕಿತ್ತು ಅಂತ ಆಮೇಲೆ ಅನಿಸಿತ್ತು. ಪುಷ್ಪ ಪ್ರದರ್ಶನ ನೋಡಲು ಆಗಲಿಲ್ಲ. ಆದರೆ ನಿಮ್ಮ ಬ್ಲಾಗಿನ ಚಿತ್ರಗಳು ಅದೆಷ್ಟು ಚೆನ್ನಾಗಿವೆ ಎ೦ದರೆ, ಮೋಹಕ, ಮನಮೋಹಕ, ಆಕರ್ಷಕ ಎ೦ಬ ಶಬ್ದಗಳೇ ಸಪ್ಪೆ ಎನಿಸುವ೦ತಿವೆ. GOOD
ReplyDeleteಉಮೇಶ,
ReplyDeleteಲಾಲ್ ಬಾಗಿನ ಪುಷ್ಪದರ್ಶನ ಮಾಡಿಸಿದಿರಿ.
ತುಂಬಾ ಚೆಲುವಿನ ಹೂಗಳನ್ನು ನೋಡಿದಂತಾಯ್ತು.
ಧನ್ಯವಾದಗಳು.
ಉಮೇಶ್ ಸರ್,
ReplyDeleteನಾನು ಲಾಲ ಬಾಗ್ ಸುಂದರಿಯರು ಅಂದಕೂಡಲೇ ನಿಜವಾಗಿ ಅಲ್ಲಿ ಅಲೆದಾಡುವ ಹುಡುಗಿಯರ ಫೋಟೋ ಅಂದುಕೊಂಡು ಆಸೆಯಿಂದ ಬ್ಲಾಗಿಗೆ ಬಂದೆ. ಆದ್ರೆ ಇಲ್ಲಿ ನೋಡಿದ್ರೆ ಕಲರ್ಪುಲ್ ಹೂಗಳು. ಇರಲಿ ಬಿಡಿ ಹೂಗಳು ಕೂಡ ತುಂಬಾ ಚೆನ್ನಾಗಿ ತೆಗೆದಿದ್ದೀರಿ. ಅದನ್ನೇ ನೋಡಿ ಖುಷಿ ಪಟ್ಟುಕೊಳ್ಳುತ್ತೀನಿ..
ಉಮೇಶ್....
ReplyDeleteಬಹಳ ಸುಂದರ ಫೋಟೊಗಳು...
ತುಂಬಾ ಖುಷಿಯಾಯಿತು...
ನಾಳೆ ಮಂಗಳವಾರ ನಾನೂ ಹೋಗಬೇಕೆಂದು ಕೊಂಡಿದ್ದೆ...
ಹೂವಿನ ದರ್ಶನ ನೀವು ಮಾಡಿಸಿ ಬಿಟ್ಟಿದ್ದೀರಿ...
ತುಂಬಾ ಸೊಗಸಾಗಿದೆ...
ನನಗೆ ಮತ್ತೇನಾದರೂ ವಿಷಯ ಸಿಗಬಹುದು... ನೋಡೋಣ...
ಖರ್ಚಿಲ್ಲದೆ..ಶ್ರಮವಿಲ್ಲದೆ
ಲಾಲ್ಬಾಗ್ ಹೂವಿನ ದರ್ಶನ ಮಾಡಿಸಿದ್ದಕ್ಕೆ...
ಚಂದದ ಫೋಟೊಗ್ರಫಿಗೆ... ಅಭಿನಂದನೆಗಳು....
ಉಮೇಶ ನಿಮ್ಮ ಕೆಮೆರಾ ಛಲೋ ಕವಿತಾ ಬರದದ...ಅಲ್ಲಾ ಚೂಡಿದಾರ್, ಸೀರೆ ಉಟ್ಟವರು ಕಣ್ಣಿಗೆ ಬೀಳಲಿಲ್ಲೇನು
ReplyDeletewht a display of fotos Umesh.. opt headings too!!
ReplyDeleteಪ್ರತಿವರ್ಷವೂ ಪುಷ್ಪ ಪ್ರದರ್ಶನ ಮಿಸ್ಸ್ ಮಾಡದೇ ನೋಡುತ್ತಿದ್ದೆ, ಈಗಿಲ್ಲಿ ಬಂದ್ಮೇಲೆ ಬರೀ ಪತ್ರಿಕೆಗಳಲ್ಲಿ ನೋಡೋದಾಗಿದೆ. ಈ ವರ್ಷ ಜನವರಿಯಲ್ಲಿ ಅಲ್ಲೆ ಇದ್ವಿ ಮತ್ತೊಮ್ಮೆ ನೋಡಿ ಆನಂದಿಸಿದ್ವಿ:)
ReplyDeleteಈ ಸರ್ತಿಯ ಲಾಲ್ ಬಾಗಿನ ಪುಷ್ಪ ದರ್ಶನವನ್ನು ನೀವು ಮಾಡಿಸಿದಿರಿ. ನಿಮ್ಮ ಚಿತ್ರಗಳು ಸೊಗಸಾಗಿವೆ. ’Floweroser' ನೋಡುವಂತೆ ಮಾಡಿದ ನಿಮಗೆ ಥ್ಯಾಂಕ್ಸ್!!
photos thumba chennagive sir.. Thanks for giving a visual treat...
ReplyDeleteVisit my blog : www.sadashivams@blogspot.com
Sadashiva MS
ಉಮೇಶ್,
ReplyDeleteಮುದ್ದಾದ ಹೂವಿನ ಚಿತ್ರಗಳು... ತುಂಬಾ ಚೆನ್ನಾಗಿವೆ.
@ಪರಾಂಜಪೆ ಸರ್,
ReplyDeleteಪುಷ್ಪ ಪ್ರದರ್ಶನ ಇನ್ನೂ ಕೆಲವು ದಿನ ನಡೆಯುತ್ತಿರುತ್ತದೆ; ಸಾಧ್ಯವಾದರೆ ಒಮ್ಮೆ ಹೋಗಿ ನೋಡಿ ಬನ್ನಿ. ಚಿತ್ರಗಳನ್ನು ಮೆಚ್ಚಿ, ಪ್ರೋತ್ಸಾಹಿಸಿದ್ದಕ್ಕೆ ಅನಂತ ವಂದನೆಗಳು.
@ಸುನಾಥ್ ಅಂಕಲ್,
ಖರೇ ಹೇಳ್ಬೇಕಂದ್ರ ನಿಜವಾದ ಹೂಗಳು ಇನ್ನೂ ಭಾಳ ಛಂದ್ ಅದಾವ್ರೀ. ನೀವು ಫೋಟೋಗಳನ್ನ ನೋಡಿ ಆನಂದಿಸಿದ್ದಕ್ಕ ಮತ್ತ ನಿಮ್ಮ ಮೆಚ್ಚಿಗಿ ಮಾತುಗಳಿಗೆ ಥ್ಯಾಂಕ್ಸ್ ರೀ.
@ಶಿವು ಸರ್,
ನಿಮ್ಮಂತ ಕಿಲಾಡಿಗಳ ಗಮನ ಸೆಳೆಯಲೆಂದೇ ನಾನು ಆ ರೀತಿ ಶೀರ್ಷಿಕೆ ಕೊಟ್ಟಿದ್ದು! ನಿಮಗೆ ನಿರಾಸೆ ಮಾಡಿದ್ದಕ್ಕೆ ಸಾರಿ :) ಹೂಗಳ ಚಿತ್ರಗಳನ್ನು ನೊಡಿ ಖುಷಿ ಪಟ್ಟಿದ್ದಕ್ಕೆ ತುಂಬ ಧನ್ಯವಾದಗಳು.
@ಪ್ರಕಾಶ್ ಸರ್,
ಖಂಡಿತ ಹೋಗಿ ಬಂದು ನಿಮಗೆ ಸಿಗುವ ವಿಷಯದ ಬಗ್ಗೆ ನಿಮ್ಮ ಬ್ಲಾಗಲ್ಲಿ ಎಲ್ಲರಿಗೂ ತಿಳಿಸಿ. ಕಾಯ್ತಾ ಇರ್ತೀವಿ. :)
ಫೋಟೋಗ್ರಫೀಯನ್ನು ಮೆಚ್ಚಿದ್ದಕ್ಕೆ ಮತ್ತು ಹೂಗಳ ಚಿತ್ರಗಳನ್ನು ನೋಡಿ ಆನಂದಿಸಿ, ಪ್ರತಿಕ್ರಿಯಿಸಿದ್ದಕ್ಕೆ ತುಂಬಾನೆ ಥ್ಯಾಂಕ್ಸ್ :)
@ಉಮೇಶ್ ದೇಸಾಯಿ ಸರ್,
ಚೂಡಿದಾರ್, ಸೀರೆ ಉಟ್ಟಾವ್ರನ್ನ ನೋಡಾಕ ಅಲ್ಲಿ ತನಕಾ ಹೋಗ್ಬೇಕಿರ್ಲಿಲ್ಲ ಬಿಡ್ರಿ. ಅದೂ ಅಲ್ದ, ನಾ ಹೂಗಳ ಫೋಟೋ ತೆಗಿಯೂದ್ ಬಿಟ್ಟು ಅವ್ರದೆಲ್ಲ ಫೋಟೋ ತಗ್ಯಾಕ ಶುರು ಮಾಡಿದ್ರ ಅಲ್ಲಿ ಫ್ಲವರ್ ಶೋ ಬದಲು ಫ್ಯಾಶನ್ ಶೋ ನೇ ಶುರು ಆಗ್ತಿತ್ತು ಅನ್ನಸ್ತೇತಿ. :)
ನನ್ ಕೆಮೆರಾ ಕವಿತಾ ಮೆಚ್ಚಿದ್ದಕ್ಕ ಥ್ಯಾಂಕ್ಸ್ ರೀ.
@ಸುಮನಾ ಮೇಡಮ್,
ಫೊಟೊಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್!
@ರೂಪಶ್ರೀಯವರೇ,
ನೀವು ಬೆಂಗಳೂರಿಗೆ ಬಂದಾಗೊಮ್ಮೆ ಫ್ಲವರ್ ಶೋ ಏನಾದ್ರೂ ನಡೀತಿದ್ರೆ ಮಿಸ್ ಮಾಡ್ಕೊಬೇಡಿ. ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
@ಸದಾಶಿವ ಅವರೇ,
ನನ್ನ ಬ್ಲಾಗಿಗೆ ಭೇಟಿ ಕೊಟ್ಟು, ಫೊಟೊಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು.
@ರಾಜೇಶ್,
ಹೂವಿನ ಚಿತ್ರಗಳನ್ನು ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್! ಫೋಟೋಗ್ರಫೀಯಲ್ಲಿ ನಾನಿನ್ನೂ ಅಂಬೆಗಾಲಿಡುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವೇ ನನಗೆ ಹೆಚ್ಚು ಕಲಿಯಲು ಸ್ಪೂರ್ತಿ. ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು.
ಪ್ರೀತಿಯಿಂದ,
- ಉಮೇಶ್
ಸುಂದರ, ಅತೀ ಸುಂದರ...
ReplyDeleteಧನ್ಯವಾದಗಳು.
ಹಲೋ ಉಮೇಶ್...
ReplyDeleteಪೋಟೋ ಹಾಗೂ ವಾಕ್ಯ ಎರಡೂ ಮುದ್ದಾಗಿವೆ. ಬಹಳ ಶ್ರಮಪಟ್ಟು ಕ್ಲೋಸ್ಅಪ್ ತೆಗೆದಿದ್ದೀರ. ಹೋಗಲಿಕ್ಕಾಗಲಿಲ್ಲ ಅನ್ನೋ ಬೇಜಾರು. ನಿಮ್ಮ ಈ ಚಿತ್ರಗಳಿಂದ ಸ್ವಲ್ಪ ತೃಪ್ತಿ.
ಹೂವೇ ಚೆಲುವೆಲ್ಲಾ ತನ್ನದೆಂದಿತ್ತು..ಸುಂದರ ಫೋಟೋಗಳು. ಕೆಲಸದೊತ್ತಡದಿಂದ ಬ್ಲಾಗ್ ಕಡೆ ಕಣ್ಣುಹಾಯಿಸಿಲ್ಲ, ಕ್ಷಮಿಸಿ.
ReplyDeleteಧನ್ಯವಾದ
-ಧರಿತ್ರಿ
@ಲೋಹಿತ್ ರವರೆ,
ReplyDeleteನನ್ನ ಬ್ಲಾಗಿಗೆ ಭೇಟಿ ನೀಡಿ, ಚಿತ್ರಗಳನ್ನು ಮೆಚ್ಚಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಕೃತಜ್ಞತೆಗಳು. ಆಗಾಗ ಬರ್ತಾ ಇರಿ.
@ಏಕಾಂತ ರವರೆ,
ಈ ಸಲದ ಪುಷ್ಪ ಪ್ರದರ್ಶನ ಮಿಸ್ ಮಾಡಿಕೊಂಡ ನಿಮಗೆ ನನ್ನ ಚಿತ್ರಗಳು ಅಲ್ಪಮಾತ್ರದ ತೃಪ್ತಿ ನೀಡಿದ್ದರೂ ನನ್ನ ಶ್ರಮ ಸಾರ್ಥಕ. ನೆಕ್ಸ್ಟ್ ಟೈಮ್ ಮಿಸ್ ಮಾಡ್ಕೊಬೇಡಿ :)
@ಧರಿತ್ರಿ,
ನನ್ನ ಬ್ಲಾಗಲ್ಲಿನ ಹೂಗಳ ಚೆಲುವನ್ನು ಆನಂದಿಸಿದ್ದಕ್ಕೆ ವಂದನೆಗಳು.
ತುಂಬಾ ಚಂದದ ಹೂಗಳ ಫೋಟೋಗಳು ... ಇಸ್ಟ್ ಬೇಗ ನೋಡಿ ಮುಗಿದು ಹೋಯ್ತಾ ಆನ್ನಿಸ್ತು .
ReplyDeleteNice collection man
ReplyDelete@ರಂಜಿತಾ ಮೇಡಮ್,
ReplyDeleteನನ್ನ ಬ್ಲಾಗಿಗೆ ಸ್ವಾಗತ. ಫೋಟೋಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಆಗಾಗ್ಗೆ ಬರ್ತಾ ಇರಿ.
@Waseem,
Thanks for the compliments dude :). Keep visiting often.
hi,
ReplyDeleteusha here.Nice pictures.. :)
can i add few more pictures here??
Hi Usha,
ReplyDeleteThanks for visiting my blog and for your compliments about the photos. If you have few more pictures that were clicked by yourself, you can send the photos to me. I will surely upload them here.