Monday, April 27, 2009

ಕೆಂಡಸಂಪಿಗೆಯಲ್ಲಿ 'ನಿನ್ನೊಲುಮೆಯ' ಪರಿಮಳ

'
ಇವತ್ತು ಬೆಳಿಗ್ಗೆ ಆಫೀಸಿಗೆ ಬಂದು, ಕಣ್ಣುಜ್ಜುತ್ತಾ (!) ನನ್ನ ಬ್ಲಾಗ್ ಡ್ಯಾಶ್‌ಬೋರ್ಡ್ ತೆರೆದು ಕೂತೆ. ಬ್ಲಾಗ್-ಮಿತ್ರರ ಬ್ಲಾಗುಗಳಲ್ಲಿ ಏನೇನು ಅಪ್‌ಡೇಟ್ಸ್ ಇವೆ ಅಂತ ನೋಡುತ್ತಿದ್ದಾಗ ಧರಿತ್ರಿಯವರ ಬ್ಲಾಗಿನಲ್ಲಿ ಕೆಂಡಸಂಪಿಗೆಗೆ ಥ್ಯಾಂಕ್ಯೂ ಹೇಳುವ ಬರಹವೊಂದಿತ್ತು. ಅರೆ, ಕೆಂಡ ಸಂಪಿಗೆಯಲ್ಲಿ ನಮ್ಮ ಧರಿತ್ರಿಯ ಬ್ಲಾಗಿನ ಬಗ್ಗೆ ಮಾಹಿತಿ ನೀಡಿದ್ದಾರಲ್ಲ ಅಂತ ಅಲ್ಲಿಂದ ಕೆಂಡಸಂಪಿಗೆಯ ಪರಿಮಳ ಹೀರಲು ಹೊರಟೆ. ಧರಿತ್ರಿ ಬಗ್ಗೆ ಓದಿ, ಹಾಗೆಯೇ ಇನ್ನಿತರ ಸುಮಾರು ಕನ್ನಡ ಬ್ಲಾಗುಗಳ ಬಗ್ಗೆ ಓದುತ್ತಾ ಹೋದಂತೆ ನನಗೊಂದು ಅಚ್ಚರಿ ಕಾದಿತ್ತು. ಉಮೇಶರ ನಿನ್ನೊಲುಮೆಯಿಂದಲೇ ಅನ್ನುವ ತಲೆಬರಹದಡಿಯಲ್ಲಿ ನನ್ನ ಬ್ಲಾಗಿನ ಬಗ್ಗೆಯೂ ಚಿಕ್ಕದಾದ ಚೊಕ್ಕದಾದ ಪರಿಚಯವಿತ್ತು! ಬ್ಲಾಗು ಲೋಕದ ಅತಿರಥ ಮಹಾರಥರ ಬ್ಲಾಗುಗಳ ಪರಿಚಯದ ನಡುವೆ ಏನಪ್ಪಾ ನನ್ನ ಬ್ಲಾಗಿನಂತ ಕೂಸುಮರಿಯ ಪರಿಚಯ ಅಂತ ಆಶ್ಚರ್ಯವಾಗಿ ಮತ್ತೊಂದು ಸಲ ಕಣ್ಣುಜ್ಜಿ ನೋಡಿದೆ. ಹೌದು, ನನ್ನ ಬ್ಲಾಗಿನ ಬಗ್ಗೆಯೇ!



ದಿನನಿತ್ಯ ಕಾಣುವ ಆಸಕ್ತಿಕರ ಸಂಗತಿಗಳನ್ನು, ಮನದ ಭಾವನೆಗಳನ್ನು, ನಾನೇ ಕ್ಲಿಕ್ಕಿಸುವ ಕೆಲವು ಛಾಯಾಚಿತ್ರಗಳನ್ನು ಮತ್ತು ಇನ್ನಿತರ ವಿಚಾರಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ ನಾನು ಈ ಬ್ಲಾಗುಲೋಕಕ್ಕೆ ಕಾಲಿಟ್ಟೆ. ನನ್ನ ಈ ಪುಟ್ಟ ಪ್ರಯತ್ನವನ್ನು ಗುರುತಿಸಿ, ಮೆಚ್ಚಿ, ಪ್ರೋತ್ಸಾಹಿಸಿದ ಕೆಂಡಸಂಪಿಗೆಗೆ ಅನಂತಾನಂತ ಧನ್ಯವಾದಗಳು.

http://www.kendasampige.com/article.php?id=1774
'

9 comments:

  1. ಅಭಿನಂದನೆಗಳು....ಸರ್..

    ReplyDelete
  2. ಅಭಿನಂದನೆಗಳು, ಹೀಗೆ ಬರೆಯುತ್ತಿರಿ

    ReplyDelete
  3. ಪರಾಂಜಪೆ ಸರ್, ಶಿವು ಸರ್, ಪ್ರಭು, ಗುರು,

    ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರಋಣಿ.

    ಧನ್ಯವಾದಗಳು.

    ReplyDelete
  4. ಶಿವಪ್ರಕಾಶ್,

    ಥ್ಯಾಂಕ್ಸ್ ರೀ :)

    ReplyDelete
  5. ಏನ್ರೀ..ಊರಲ್ಲಿಲ್ವಾ? ಬರೆದೇ ಇಲ್ಲ
    -ಧರಿತ್ರಿ

    ReplyDelete
  6. ಹಾಯ್ ಧರಿತ್ರಿ,

    ಕೆಲಸದ ಒತ್ತಡದಿಂದಾಗಿ ಈ ಮಧ್ಯೆ ಬರೆಯಲು ಬಿಡುವು ಸಿಕ್ಕಿರಲಿಲ್ಲ. ಸಾರಿ :)

    ಆದಷ್ಟು ಬೇಗ ಬ್ಲಾಗ್ ಅಪ್‌ಡೇಟ್ ಮಾಡುತ್ತೇನೆ.

    ನಿಮ್ಮ ಅಭಿಮಾನ, ಪ್ರೋತ್ಸಾಹಕ್ಕೆ ಧನ್ಯವಾದಗಳು.

    - ಉಮೀ

    ReplyDelete