'
ಮೊನ್ನೆ ಸ್ನೇಹಿತರೊಡನೆ ತಮಿಳುನಾಡಿನ ತಿರುವಣ್ಣಮಲೈಗೆ ಹೋಗಿದ್ದೆ. ಅಬ್ಬಾ, ಯಾವುದೋ ಅನ್ಯಗ್ರಹಕ್ಕೆ ಹೋಗಿ ಬಂದ ಅನುಭವ. ಅಲ್ಲಿಯ ಬಹುಪಾಲು ಜನಕ್ಕೆ ಕನ್ನಡ, ಇಂಗ್ಲೀಷ್, ಹಿಂದಿ ಬರಲ್ಲ, ನಮಗೆ ಇವಷ್ಟನ್ನು ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ಅದೇನು ತಮಿಳರ ಭಾಷಾ ದುರಭಿಮಾನ! ಯಾವಾಗ ವಾಪಸ್ ಕರ್ನಾಟಕಕ್ಕೆ ಬರುತ್ತೇನೋ ಅನ್ನಿಸುತ್ತಿತ್ತು. ದೇವರ ದರ್ಶನದ ನಂತರ ಅಲ್ಲಿಯೇ ಹತ್ತಿರದ ಸಾತನೂರು ಡ್ಯಾಮ್ ನೋಡಲು ಹೋಗಿದ್ದೆವು. ಅಲ್ಲಿ, ಕೃತಕ ಸರೋವರವೊಂದರಲ್ಲಿ ಪೆಡಲ್ ಬೋಟ್ ಮಜ ಅನುಭವಿಸಿ ವಾಪಸ್ ಬರುವಾಗ ಅಲ್ಲಿಯ ಒಬ್ಬ ಮಹಿಳೆ ನನ್ನ ಸ್ನೇಹಿತನೊಬ್ಬನಿಗೆ "ಯಾವೂರು" ಅಂತ ತಮಿಳಿನಲ್ಲಿ ಕೇಳಿದಳು. ಅವನು ಕನ್ನಡದಲ್ಲಿಯೇ "ನಾವು ಬೆಂಗಳೂರಿನವರು" ಅಂದ. ಅದಕ್ಕೆ ಆಯಮ್ಮ, ತಮಿಳಿನಲ್ಲಿಯೇ "ಬೆಂಗಳೂರಿನವರಾಗಿದ್ದುಕೊಂಡು ತಮಿಳು ಬರಲ್ಲವೇ" ಅನ್ನಬೇಕೆ!? ನನಗೆ ಮೈಯೆಲ್ಲ ಉರಿದು ಹೋಯಿತು; ನನಗೆ ಬರುತ್ತಿದ್ದ ಹರಕು ಮುರುಕು ತಮಿಳಿನಲ್ಲಿಯೇ "ಬೆಂಗಳೂರೇನ್ ತಮಿಳುನಾಡಲ್ ಇರಕ್ಕಾ" ಅಂತ ಕೇಳಿದೆ. ಆಯಮ್ಮನಿಗೆ ಅದೇನು ಅರ್ಥವಾಯಿತೋ, ಏನೋ, ನಮ್ಮನ್ನೇ ಪಿಳಿ ಪಿಳಿ ನೋಡುತ್ತ ನಿಂತಳು. ನಾವು ಇವರ ಸಹವಾಸವೇ ಸಾಕಪ್ಪ ಅಂತ ಬೆಂಗಳೂರಿಗೆ ವಾಪಸ್ಸಾದೆವು.
ಎರಡು ತಿಂಗಳು ದೂರದ ಅಮೇರಿಕದಲ್ಲಿ ಇದ್ದಾಗಲೂ ಒಂದು ದಿನ ಪಕ್ಕದ ತಮಿಳುನಾಡಿನಲ್ಲಿ ಇದ್ದಷ್ಟು ಕಷ್ಟ ಆಗಿರಲಿಲ್ಲ.
'
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
8 months ago